ಎರ್ನಾಕುಲಂ( ಕೇರಳ): ಮಲಯಾಳಂನ 'ಮರಕ್ಕರ್: ಅರಬಿಕಡಲಿಂಟೆ ಸಿಂಹಮ್' ಚಿತ್ರಕ್ಕೆ ಅತ್ಯುತ್ತಮ ಚಿತ್ರ ರಾಷ್ಟ್ರೀಯ ಪ್ರಶಸ್ತಿ ಬಂದಿದಕ್ಕೆ ಕಾಲಿವುಡ್ನ ಹಿರಿಯ ನಟ ಮೋಹನ್ ಲಾಲ್ ಸಂತೋಷ ವ್ಯಕ್ತ ಪಡಿಸಿದ್ದಾರೆ.
'ಮರಕ್ಕರ್: ಅರಬಿಕಡಲಿಂಟೆ ಸಿಂಹಮ್' ಚಿತ್ರಕ್ಕೆ ಅತ್ಯುತ್ತಮ ಚಿತ್ರ ಎಂಬ ರಾಷ್ಟ್ರೀಯ ಗರಿ ಸಿಕ್ಕಿದೆ. ಇದು ಸಹಜವಾಗೇ ಖುಷಿ ತಂದಿದೆ. ಈ ಚಿತ್ರದಲ್ಲಿ ನಾನು ನಟಿಸಿದ್ದು ಮತ್ತಷ್ಟು ಖುಷಿ ನೀಡಿದೆ. ಈ ಪ್ರಶಸ್ತಿಯ ಶ್ರೇಯಸ್ಸು ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಸೇರುತ್ತದೆ ಎಂದಿದ್ದಾರೆ. ಈ ಚಿತ್ರದಲ್ಲಿ ಅತ್ಯುತ್ತಮ ಗ್ರಾಫಿಕ್ಸ್ ಮತ್ತು ಉತ್ತಮವಾದ ಕಾಸ್ಟೂಮ್ ಡಿಸೈನಿಂಗ್ ಇದ್ದಿದ್ದು ಚಿತ್ರದ ಗೆಲುವಿಗೆ ಮುಖ್ಯ ಕಾರಣವಾಗಿದೆ. ಈ ಎಲ್ಲದರ ಶ್ರೇಯಸ್ಸು ಚಿತ್ರದ ನಿರ್ಮಾಪಕ ಆಂಟನಿ ಪೆರುಂಬವೂರ್‌ಗೆ ಸಲ್ಲುತ್ತದೆ. ಅಂತಹ ಚಿತ್ರ ಮಾಡುವ ಧೈರ್ಯ ಅವರಿಗೆ ಇದ್ದುದರಿಂದ ಎಲ್ಲವು ಸಾಧ್ಯವಾಯಿತು ಎಂದು ಮೋಹನ್‌ಲಾಲ್ ಗುಣಗಾನ ಮಾಡಿದ್ದಾರೆ.