ಕರ್ನಾಟಕ

karnataka

ETV Bharat / sitara

ಅಪ್ಪನಂತೆ 'ಗಿಟಾರ್' ಹಿಡಿದ ಪುತ್ರ.. -ಮನೋರಂಜನ್ ಕೂಡ ಈಗ ಕ್ರೇಜಿ.. - undefined

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ 'ಬೃಹಸ್ಪತಿ' ನಂತರ 'ಪ್ರಾರಂಭ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸೈಲೆಂಟಾಗಿ ಶೂಟಿಂಗ್ ಶುರುವಾಗಿರುವ 'ಪ್ರಾರಂಭ'ದಲ್ಲಿ ಅಪ್ಪನಂತೆ ಮನೋರಂಜನ್ ಕೂಡ ಕೈಯಲ್ಲಿ ಗಿಟಾರ್‌ ಹಿಡಿದು ಲವರ್ ಬಾಯ್ ಲುಕ್​​ನಲ್ಲಿ ಮಿಂಚಿದ್ದಾರೆ.

ಕ್ರೇಜಿ ಸ್ಟಾರ್ ಪುತ್ರ ಮನೋರಂಜನ್

By

Published : Apr 3, 2019, 5:19 PM IST

Updated : Apr 3, 2019, 5:25 PM IST

ಬೆಂಗಳೂರು, ಚಿಕ್ಕಮಗಳೂರು, ಬಳ್ಳಾರಿ ಮುಂತಾದ ಕಡೆ ನಮ್ಮ ಚಿತ್ರತಂಡ ಶೂಟಿಂಗ್ ಮುಗಿಸಿದೆ. ಎರಡು ಹಾಡು ಹಾಗೂ ಒಂದು ಫೈಟ್ ಮಾತ್ರ ಬಾಕಿ ಉಳಿದಿದ್ದು, ಆದಷ್ಟು ಬೇಗ ಶೂಟಿಂಗ್‌ ಮುಗಿಸುವುದಾಗಿ ನಿರ್ದೇಶಕ ಮನು ಕಲ್ಯಾಡಿ ಹೇಳಿದ್ದಾರೆ. ಮನು ಕಲ್ಯಾಡಿ ಈ ಹಿಂದೆ ಹಲವು ಚಿತ್ರಗಳಿಗೆ ಸಂಭಾಷಣೆ​ ಬರೆದಿದ್ದಾರೆ.

ಕ್ರೇಜಿ ಸ್ಟಾರ್ ಪುತ್ರ ಮನೋರಂಜನ್

'ಪ್ರಾರಂಭ'ದಲ್ಲಿ ಮನೋರಂಜನ್​ಗೆ ನಾಯಕಿಯಾಗಿ ಕೀರ್ತಿ ನಟಿಸಿದ್ದಾರೆ. ಅವರಿಗಿದು ಚೊಚ್ಚಲ ಸಿನಿಮಾ. ಉಳಿದಂತೆ ಕಡ್ಡಿಪುಡ್ಡಿ ಚಂದ್ರು, ಹನುಮಂತೇಗೌಡ, ರಾಘು ಶ್ರೀವಾಸ್ತವ್, ಶಾಂಭವಿ, ಸೂರಜ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

ಜಗದೀಶ್ ಕಲ್ಯಾಡಿ ಈ ಚಿತ್ರದ ನಿರ್ಮಾಪಕ. ಪ್ರಜ್ವಲ್ ಪೈ ಸಂಗೀತ ನೀಡಿದ್ದು, ಸಂತೋಷ್ ನಾಯಕ್ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಸುರೇಶ್ ಬಾಬು ಕ್ಯಾಮರಾ ವರ್ಕ್​, ವಿಜಿ ಎಂ. ಕುಮಾರ್ ಎಡಿಟಿಂಗ್​, ವಿಕ್ರಂ ಮೋರ್ ಸಾಹಸ ನಿರ್ದೇಶನ ಹಾಗೂ ರವಿ ಸಂತೆಹೈಕ್ಲು ಕಲಾ ನಿರ್ದೇಶನ ಚಿತ್ರಕ್ಕಿದೆ. ಈ ಸಿನಿಮಾ ಕ್ರೇಜಿ ಸ್ಟಾರ್ ಪುತ್ರನಿಗೆ ಸಕ್ಸಸ್ ತಂದು ಕೊಡುವ ಸೂಚನೆ ಇದೆ.

Last Updated : Apr 3, 2019, 5:25 PM IST

For All Latest Updates

TAGGED:

ABOUT THE AUTHOR

...view details