ಕರ್ನಾಟಕ

karnataka

ETV Bharat / sitara

ಕೊರೊನಾಗೆ ಬಲಿಯಾದ 'ಕೋಟಿ' ನಿರ್ಮಾಪಕ, ಮಾಲಾಶ್ರೀ ಪತಿ ರಾಮು - ಮಹಮಾರಿಗೆ ಮಾಲಾಶ್ರೀ ಪತಿ ನಿಧನ

ಕನ್ನಡದ ಖ್ಯಾತ ನಟಿ ಮಾಲಾಶ್ರೀ ಅವರ ಪತಿ, ನಿರ್ಮಾಪಕ ಕೋಟಿ ರಾಮು ಕೋವಿಡ್​ನಿಂದ ನಿಧನರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

Actor Malasree husband Ramu
Actor Malasree husband Ramu

By

Published : Apr 26, 2021, 9:08 PM IST

Updated : Apr 26, 2021, 9:15 PM IST

ಬೆಂಗಳೂರು:ಮಹಾಮಾರಿ ಕೊರೊನಾ ವೈರಸ್​ಗೆ ಇದೀಗ ಸ್ಯಾಂಡಲ್​ವುಡ್​ನ ಕೋಟಿ ನಿರ್ಮಾಪಕ ಎಂದು ಕರೆಯಿಸಿಕೊಂಡಿದ್ದ ನಿರ್ಮಾಪಕ, ನಟಿ ಮಾಲಾಶ್ರೀ ಪತಿ ರಾಮು ನಿಧನರಾಗಿದ್ದಾರೆ.

ಮಾಲಾಶ್ರೀ ಜತೆ ರಾಮು

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಅವರು ಇಂದು ಸಂಜೆ ಇಹಲೋಕ ತ್ಯಜಿಸಿದ್ದಾಗಿ ಮಾಹಿತಿ ತಿಳಿದು ಬಂದಿದೆ. 52 ವರ್ಷದ ರಾಮು ಅವರಿಗೆ ಒಂದು ವಾರದ ಹಿಂದೆ ಕೊರೊನಾ ಪಾಸಿಟಿವ್ ಬಂದಿತ್ತು.

ಮದುವೆ ಸಂಭ್ರಮದ ಫೋಟೋ

ಇದರ ಮಧ್ಯೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ಮೂರು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಮಾಲಾಶ್ರೀ ಜೊತೆ ರಾಮು

ಗೋಲಿಬಾರ್, ಎಕೆ 47, ಸಿಂಹದ ಮರಿಯಂತಹ ಬ್ಲಾಕ್ ಬಸ್ಟರ್ ಚಿತ್ರ ನಿರ್ಮಿಸಿ ಕನ್ನಡದ ಕೋಟಿ ನಿರ್ಮಾಪಕ ಎಂದೇ ಖ್ಯಾತಿ ಪಡೆದುಕೊಂಡಿದ್ದರು.

ಕುಟುಂಬದೊಂದಿಗೆ ರಾಮು

ಕನ್ನಡ ಚಿತ್ರರಂಗದಲ್ಲಿ 39 ಚಿತ್ರ ನಿರ್ಮಾಣ ಮಾಡಿರುವ ಇವರು, ಗೋಲಿಬಾರ್​ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಲಗ್ಗೆ ಹಾಕಿದ್ದರು. ವಿಶೇಷವೆಂದರೆ

ಮಾಲಾಶ್ರೀ ಜತೆ ಗಂಡ ರಾಮು

ಕನ್ನಡದಲ್ಲಿ ಕೋಟಿ ಬಜೆಟ್​​ನ ಚಿತ್ರ ನಿರ್ಮಾಣ ಮಾಡಿದ್ದರು. ಹೀಗಾಗಿ ಅವರಿಗೆ ಕೋಟಿ ರಾಮು ಎಂಬ ಹೆಸರು ಬಂದಿತ್ತು.

ಕುಟುಂಬದೊಂದಿಗೆ ರಾಮು

ಸ್ಯಾಂಡಲ್​ವುಡ್​​ ಚಿತ್ರರಂಗದಲ್ಲಿ 39 ಚಿತ್ರ ನಿರ್ಮಾಣ ಮಾಡಿರುವ ಇವರು, ಗೋಲಿಬಾರ್​ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಲಗ್ಗೆ ಹಾಕಿದ್ದರು.

ಮದುವೆ ಸಂದರ್ಭದಲ್ಲಿ ರಾಮು
Last Updated : Apr 26, 2021, 9:15 PM IST

ABOUT THE AUTHOR

...view details