ಅಮಲಪುರಂ ಪಟ್ಟಣ (ಆಂಧ್ರ ಪ್ರದೇಶ):ಎರಡು ತಿಂಗಳ ಮಗುವಿನ ಹೃದಯ ಕಸಿಗಾಗಿ ಆರ್ಥಿಕ ನೆರವು ನೀಡುವ ಮೂಲಕ ನಮ್ಮ ಕಂದನಿಗೆ ಪುನರ್ಜನ್ಮ ಕೊಟ್ಟಿದ್ದಾರೆ ಎಂದು ಪ್ರದೀಪ್, ನಾಗಜ್ಯೋತಿ ದಂಪತಿ ನಟ ಮಹೇಶ್ಬಾಬು ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಮೊದಲು ಮಗುವಿನ ಆರೋಗ್ಯ ಚೆನ್ನಾಗಿತ್ತು. ಕೆಲವು ದಿನಗಳ ನಂತರ ಅನಾರೋಗ್ಯ ಕಾಣಿಸಿಕೊಂಡಿತು. ಆಗ ಅಮಲಾಪುರದ ಆಸ್ಪತ್ರೆಯಲ್ಲಿ ಸೇರಿಸಲಾಗಿತ್ತು. ಅಪರೂಪದ ಹೃದಯ ರೋಗದಿಂದ ಮಗು ಬಳಲುತ್ತಿದೆ ಎಂದು ವೈದ್ಯರು ಪೋಷಕರಿಗೆ ತಿಳಿಸಿದರು.