ಕೆಂಪೇಗೌಡ-2 ಸಿನಿಮಾದಲ್ಲಿ ಸೂಪರ್ ಕಾಪ್ ಪಾತ್ರದಲ್ಲಿ ಮಿಂಚಿದ್ದ ಕೋಮಲ್ ಈ ಸಿನಿಮಾ ಬಳಿಕ ಯಾವ ಸಿನಿಮಾಗಳನ್ನೂ ಒಪ್ಪಿಕೊಂಡಿರಲಿಲ್ಲ. ಈಗ 2020 ಅಂತಾ ಟೈಟಲ್ ಇಟ್ಟುಕೊಂಡು ಕೋಮಲ್ ಹೊಸ ಲುಕ್ನಲ್ಲಿ ಮಿಂಚೋದಕ್ಕೆ ಸಜ್ಜಾಗಿದ್ದಾರೆ.
ಕೆಂಪೇಗೌಡ-2 ಬಳಿಕ ಮತ್ತೆ ಬಂದ್ರು ಕೋಮಲ್... ಇವರ ಹೊಸ ಸಿನಿಮಾ ಟೈಟಲ್ ಏನು ಗೊತ್ತಾ? - ನಟ ಕೋಮಲ್ ಅಭಿನಯದ 2020
ಬರೀ ಕಹಿ ಘಟನೆಗಳನ್ನೇ ನೀಡುತ್ತಾ ಬಂದಿರುದ 2020ನೇ ವರ್ಷವನ್ನು ಸಿನಿಮಾ ಮಾಡಿದ್ರೆ ಹೇಗಿರತ್ತೆ... ಸ್ಯಾಂಡಲ್ವುಡ್ನಲ್ಲಿ ಈ ಒಂದು ಟೈಟಲ್ನೊಂದಿಗೆ ಕೋಮಲ್ ಅಭಿನಯದಲ್ಲಿ ಹೊಸ ಸಿನಿಮಾವೊಂದು ಸೆಟ್ಟೇರಲಿದೆ.
ಯಾರೂ ಮರಿಯೋದಿಕ್ಕೆ ಆಗದ 2020 ವರ್ಷವನ್ನು ಚಿತ್ರಕ್ಕೆ ಟೈಟಲ್ ಆಗಿ ನೀಡಿದ್ದು, ಮಹಾಲಕ್ಷ್ಮಿ ಲೇಔಟ್ನ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ಸೆಟ್ಟೇರಿದೆ. ಕೋಮಲ್ಗೆ ಜೋಡಿಯಾಗಿ ಧನ್ಯ ಕಾಣಿಸಿಕೊಳ್ಳುತ್ತಿದ್ದಾರೆ. ಸಂಪೂರ್ಣ ಹಾಸ್ಯ ಪ್ರಧಾನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ರಾಬರ್ಟ್, ವಿಕ್ಟರಿ-2, ತ್ರಿಬಲ್ ರೈಡಿಂಗ್, ಉಪಾಧ್ಯಕ್ಷ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಕೆ.ಎಲ್.ರಾಜಶೇಖರ್ ನಿರ್ದೇಶನ ಮಾಡುತ್ತಿದ್ದಾರೆ.
ಇನ್ನು ಕೋಮಲ್ ಮತ್ತು ಧನ್ಯಾ ಅಲ್ಲದೆ ಬಾಲಕೃಷ್ಣ, ಕುರಿ ಪ್ರತಾಪ್, ತಬಲಾ ನಾಣಿ, ಗಿರಿ, ಅಪೂರ್ವ ಮತ್ತಿತರರು ಮುಖ್ಯ ಭೂಮಿಕೆಯಲ್ಲಿದ್ದಾರೆ. 2020 ಚಿತ್ರಕ್ಕೆ ನವೀನ್ ಕುಮಾರ್ ಎಸ್. ಛಾಯಾಗ್ರಹಣವಿದ್ದು, ಕೆ.ಎಂ.ಪ್ರಕಾಶ್ ಸಂಕಲನವಿದೆ. ಶ್ರೀಧರ್ ವಿ. ಸಂಭ್ರಮ ಸಂಗೀತ ನಿರ್ದೇಶನ ಈ ಚಿತ್ರಕ್ಕೆ ಮೆರಗು ನೀಡಲಿದೆ. ಅಯೋಗ್ಯ ಸೇರಿದಂತೆ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ಟಿ.ಆರ್.ಚಂದ್ರಶೇಖರ್ ಈ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ. ನವಂಬರ್ ಕೊನೆಯಲ್ಲಿ 2020 ಚಿತ್ರದ ಚಿತ್ರೀಕರಣ ಶುರುವಾಗಲಿದೆ. ಬೆಂಗಳೂರಿನಲ್ಲೇ ಇಡೀ ಚಿತ್ರದ ಚಿತ್ರೀಕರಣ ಮಾಡೋದಕ್ಕೆ ಚಿತ್ರತಂಡ ಪ್ಲಾನ್ ಮಾಡಿದೆ.