ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಚತುರ ಆಟಗಾರ ಸುನಿಲ್ ನರೈನ್ ಅವರ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಸೋತಿದೆ. ಈ ಮೂಲಕ 'ಈ ಸಲ ಕಪ್ ನಮ್ದೆ' ಎನ್ನುವ ಆಸೆ ಹೊತ್ತು ಕಣಕ್ಕಿಳಿದಿದ್ದ ತಂಡಕ್ಕೆ ಭಾರಿ ನಿರಾಶೆಯಾಗಿದೆ.
ಅಲ್ಲದೆ ಅಪಾರ ಅಭಿಮಾನಿಗಳ ಬಳಗ ಹೊಂದಿರುವ ಆರ್ಸಿಬಿ ಸೋಲು ಕಾಣುತ್ತಿದ್ದಂತೆ, ಕೆಲ ಫ್ಯಾನ್ಸ್ ಭಾರವಾದ ನೋವು ಹೊರ ಹಾಕಿದ್ದಾರೆ. ಸೋಲುಂಡರೂ ಕೆಲವರು ಅಭಿಮಾನ ಮೆರೆದಿದ್ದಾರೆ. ಇದರಲ್ಲಿ ಸ್ಯಾಂಡಲ್ವುಡ್ ನಟ ಸುದೀಪ್ ಕೂಡ ಒಬ್ಬರು.
ಆರ್ಸಿಬಿ ವಿಕೆಟ್ ಪಡೆದ ಸಂಭ್ರಮದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಟ್ಟಾ ಅಭಿಮಾನಿಯಾದ ಕಿಚ್ಚ ಸುದೀಪ್ ಕೂಡ ನಿನ್ನೆ ನಡೆದ ಪಂದ್ಯವನ್ನು ಟ್ವೀಟ್ ಮಾಡುವ ಮೂಲಕ ಮೆಲುಕು ಹಾಕಿದ್ದಾರೆ.
ನೆಚ್ಚಿನ ತಂಡ ಸೋಲುತಿದ್ದಂತೆ ಬೇಸರದ ಜೊತೆಗೆ ಅಭಿಮಾನವನ್ನು ವ್ಯಕ್ತಪಡಿಸಿರುವ ಸುದೀಪ್, ಇದು ಕೆಟ್ಟ ಸಮಯ. ಒಳ್ಳೆಯ ಸ್ಪರ್ಧೆಯಾಗಿತ್ತು. ಆರ್ಸಿಬಿ ಗೆಲುವಿಗಾಗಿ ಕೊನೆಯವರೆಗೂ ಹೋರಾಟ ನಡೆಸಿತು. ತೆಗೆದುಕೊಂಡ ನಿರ್ಧಾರ ಕಾಠಿಣ್ಯದಿಂದ ಕೂಡಿತ್ತು.
ಹಾಗಾಗಿ, ನಿಮ್ಮನ್ನು ಮೆಚ್ಚಲೇಬೇಕು. ಆರ್ಸಿಬಿ ಫಾರ್ ಎವರ್ ಎಂದು ನಾಯಕತ್ವದಿಂದ ಕೆಳಗಿಳಿದ ವಿರಾಟ್ ಕೊಹ್ಲಿ ಬಗ್ಗೆಯೂ ಟ್ವೀಟ್ ಮಾಡಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅನೇಕ ಅಭಿಮಾನಿಗಳು ಸಹ ಇದೇ ರೀತಿ ಹೆಮ್ಮೆ ವ್ಯಕ್ತಪಡಿಸಿ ಟ್ವೀಟ್ ಮಾಡುತ್ತಿದ್ದಾರೆ.
14ನೇ ಐಪಿಎಲ್ನ ಎರಡನೇ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಸುನಿಲ್ ನರೈನ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 138 ರನ್ಗಳಿಸಿತ್ತು. ಈ ಗುರಿಯನ್ನು ಕೋಲ್ಕತ್ತಾ 6 ವಿಕೆಟ್ ನಷ್ಟಕ್ಕೆ 19.4ನೇ ಓವರ್ನಲ್ಲಿ ತಲುಪುವಲ್ಲಿ ಯಶಸ್ವಿಯಾಗಿದೆ.