ನಿನ್ನೆ ರಿಲೀಸ್ ಆಗಿರುವ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಭಿನಯದ 'ಅಮರ್' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಂಬರೀಶ್ ಪುತ್ರನ ಮೊದಲ ಚಿತ್ರಕ್ಕೆ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದ ಖ್ಯಾತನಾಮರು ಗುಡ್ ಲಕ್ ಹೇಳ್ತಿದ್ದಾರೆ. ಇದೀಗ ಕಿಚ್ಚ ಸುದೀಪ್ ಕೂಡ ಅಭಿಷೇಕ್ ಅಂಬರೀಶ್‌ಗೆ ಶುಭಾಶಯ ಹೇಳಿದ್ದಾರೆ.
'ಮಂಡ್ಯದ ಮರಿಗಂಡಿ'ಗೆ ಕಿಚ್ಚ ಸುದೀಪ್ ನೀಡಿದ್ರು ಸಲಹೆ - undefined
ಅಭಿಷೇಕ್ ನಾಯಕ ನಟನಾಗಿ ಅಭಿನಯಿಸಿರುವ 'ಅಮರ್' ಚಿತ್ರಕ್ಕೆ ಸೂಪರ್ ಸ್ಟಾರ್ ರಜನಿಕಾಂತ್, ಮೆಗಾ ಸ್ಟಾರ್ ಚಿರಂಜೀವಿ, ಕನ್ನಡದ ನಟ ದರ್ಶನ್, ಯಶ್ ಸೇರಿದಂತೆ ಸಾಕಷ್ಟು ಸೆಲಬ್ರಿಟಿಗಳು ಶುಭ ಹಾರೈಸಿದ್ದರು. ಈಗ ಈ ಸರದಿ ಕಿಚ್ಚ ಸುದೀಪ್ ಅವರದ್ದು.

ಸಹಜವಾಗಿ ಡೆಬ್ಯೂ ಸಿನಿಮಾ ರಿಲೀಸ್ ದಿನದಂದು ಎಲ್ಲರಿಗೂ ಟೆನ್ಷನ್ ಇದ್ದೇ ಇರುತ್ತೆ. ನನಗೂ ಇತ್ತು. ಆದರೆ, ನಿಮಗೆ ಎರಡು ಟೆನ್ಷನ್‌ಗಳಿವೆ. ಮೊದಲನೇಯದ್ದು, ನಿಮ್ಮ ಚೊಚ್ಚಲ ಚಿತ್ರ ಬಿಡುಗಡೆಯಾಗುತ್ತಿರುವುದು. ಇನ್ನೊಂದು, ಅಂಬರೀಶ್ ಅವರ ಮಗ ಎನ್ನುವುದು. ಅಂಬಿಯವರು ವಿವಿಧ ರೀತಿಯ ಸಿನಿಮಾ ಮಾಡಿದ್ದರು. ಅವರ ಮಗ ಏನ್ ಮಾಡ್ತಾನೆ? ಎನ್ನುವ ಜನರ ಮಾತುಗಳನ್ನು ಕೇಳಿ ಕೇಳಿ ನಿಮಗೂ ತಲೆಬಿಸಿ ಆಗಿರುತ್ತದೆ. ಆದರೆ, ಇದನ್ನೆಲ್ಲಾ ಬಿಟ್ಟು ಚೆನ್ನಾಗಿ ಸಿನಿಮಾ ಎಂಜಾಯ್ ಮಾಡೋಕೆ ಪ್ರಾರಂಭಿಸಿ, ಎಂದಿರುವ ಸುದೀಪ್, ನೀವು ಚೆನ್ನಾಗಿ ಮಾಡ್ತೀರಾ. ಕನ್ನಡ ಚಿತ್ರರಂಗದ ಪರವಾಗಿ ನಿಮಗೆ ಸ್ವಾಗತ ಕೋರುತ್ತೇನೆ ಎಂದಿದ್ದಾರೆ.
ಹಾಗೆಯೇ ಫ್ಯಾಮಿಲಿ ಸಮೇತ 'ಅಮರ್' ಸಿನಿಮಾ ನೋಡ್ತೀನಿ ಎಂದಿರುವ ಸುದೀಪ್, ಇಡೀ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ತಿಳಿಸಿದ್ದಾರೆ.