ಕರ್ನಾಟಕ

karnataka

ETV Bharat / sitara

​​​​​​​ಮತ್ತೇ ನಟ ನಂದನ್​ಗೆ 'ಗುರು'ವಾದ ಕಿಚ್ಚ ಸುದೀಪ್ - ಗುರು,ಕಿಚ್ಚ ಸುದೀಪ್

ನಟ ಗುರು ನಂದನ್​ ಅವರ ರಾಜು ಕನ್ನಡ ಮೀಡಿಯಂ ಚಿತ್ರದಲ್ಲಿ ಕಿಚ್ಚ ಸುದೀಪ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಈ ಪಾಲ್ಗೊಳ್ಳುವಿಕೆ ಈ ಚಿತ್ರಕ್ಕೆ ಭಾರಿ ಮೈಲೇಜ್ ನೀಡಿತ್ತು.

ನಟ ಗುರುನಂದನ್​​​ ಅವರ ಮಿಸ್ಸಿಂಗ್ ಬಾಯ್​ ಚಿತ್ರಕ್ಕೆ ಸುದೀಪ್​ ಸಾಥ್

By

Published : Mar 5, 2019, 6:21 PM IST

'ರಾಜು ಕನ್ನಡ ಮೀಡಿಯಂ' ಚಿತ್ರದಲ್ಲಿ ಪ್ರಮುಖ ಪಾತ್ರ ನಿಭಾಯಿಸಿ ಗೆಲುವಿಗೆ ಕಾರಣವಾಗಿದ್ದ ಸುದೀಪ್​, ಈಗ ಮತ್ತೊಮ್ಮೆ ನಟ ಗುರುನಂದನ್​​​ ಅವರ ಮಿಸ್ಸಿಂಗ್ ಬಾಯ್​ ಚಿತ್ರಕ್ಕೆ ಸಾಥ್ ನೀಡುತ್ತಿದ್ದಾರೆ.

ಹಾಗಂತಾ ಅವರು ಚಿತ್ರದಲ್ಲಿ ನಟಿಸುತ್ತಿಲ್ಲ, ಬದಲಾಗಿ ಮಿಸ್ಸಿಂಗ್ ಬಾಯ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಮತ್ತೆ ಗುರುನಂದನ್​​ಗೆ ಸಹಾಯ ಮಾಡಿದ್ದಾರೆ. ಈ ಬಗ್ಗೆ ನಿರ್ದೇಶಕ ರಘುರಾಮ್ ಟ್ವಿಟ್ ಮಾಡಿದ್ದಾರೆ.

ಇದೇ ತಿಂಗಳು 7 ರಂದು ನಮ್ಮ ಚಿತ್ರದ ಟ್ರೇಲರ್​​ನ್ನು ಕಿಚ್ಚ ಸುದೀಪ್ ಲಾಂಚ್ ಮಾಡಲಿದ್ದಾರೆ. ಮಕ್ಕಳು ತಾಯಿಯ ಹತ್ತಿರ, ವಿದ್ಯಾರ್ಥಿಗಳು ಶಿಕ್ಷಕರ ಹತ್ತಿರ ಪ್ರೀತಿ ಕಲಿಕೆಗೆ ಹೋಗುವುದು ವಾಡಿಕೆ. ನನ್ನಂಥ ನಿರ್ದೇಶಕನ ಕನಸಿಗೆ ಕಿಚ್ಚ ಹೆಗಲು ಕೊಡುತ್ತಾರೆ ಅಂತಾ ನಿರ್ದೇಶಕ ರಘುರಾಮ್​ ಬರೆದುಕೊಂಡಿದ್ದಾರೆ.

ಕಿಚ್ಚನ ಜತೆ ನಿರ್ದೇಶಕ ರಘರಾಮ್

ABOUT THE AUTHOR

...view details