ಕಳೆದ ಎರಡು ದಿನಗಳ ಹಿಂದೆ ಹೊರಬಿದ್ದಿದ್ದ ಪೈಲ್ವಾನ್ ನೂತನ ಪೋಸ್ಟರ್ ಅಭಿಮಾನಿಗಳಿಂದ, ಕನ್ನಡ ಹಾಗೂ ಪರ ಚಿತ್ರರಂಗದ ನಟ-ನಟಿಯರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೇಡಿಂಗ್ಲ್ಲಿದೆ. ಐದು ಭಾಷೆಯಲ್ಲಿ ಅನಾವರಣಗೊಂಡಿದ್ದ ಚಿತ್ರದ ಪಟಕ್ಕೆ ಅಪಾರವಾದ ಪ್ರೀತಿ ಅಭಿಮಾನಿಗಳಿಂದ ವ್ಯಕ್ತವಾಗಿದೆ. ಇದು ಕಿಚ್ಚ ಸುದೀಪ್ ಅವರ ಹೃದಯವನ್ನು ತಟ್ಟಿದೆ.
ಅದನ್ನೆಲ್ಲ ಲಂಚ ಕೊಟ್ಟು ಸಂಪಾದಿಸಲು ಆಗೋದಿಲ್ಲ: ಕಿಚ್ಚ ಸುದೀಪ್ - undefined
ತಮ್ಮ 'ಪೈಲ್ವಾನ್' ಸಿನಿಮಾ ಹೊಸ ಲುಕ್ಗೆ ಅದ್ಧೂರಿ ಸ್ವಾಗತ ಕೋರಿ ಸ್ವೀಕರಿಸಿದ ಅಭಿಮಾನಿಗಳಿಗೆ ನಟ ಕಿಚ್ಚ ಸುದೀಪ್ ಧನ್ಯವಾದ ಹೇಳಿದ್ದಾರೆ.
![ಅದನ್ನೆಲ್ಲ ಲಂಚ ಕೊಟ್ಟು ಸಂಪಾದಿಸಲು ಆಗೋದಿಲ್ಲ: ಕಿಚ್ಚ ಸುದೀಪ್](https://etvbharatimages.akamaized.net/etvbharat/prod-images/768-512-3485321-thumbnail-3x2-sudeep.jpg)
ಕಿಚ್ಚ ಸುದೀಪ್
ತಮ್ಮ ಅಭಿಮಾನಿಗಳ ಬೆಟ್ಟದಷ್ಟು ಪ್ರೀತಿಗೆ ಅಭಿನಯ ಚಕ್ರವರ್ತಿ ಥ್ಯಾಂಕ್ಸ್ ಹೇಳಿದ್ದಾರೆ. ನಿನ್ನೆ ಟ್ವಟರ್ನಲ್ಲಿ ಸೆಲ್ಫಿ ವಿಡಿಯೋದಲ್ಲಿ ಮಾತಾಡಿರುವ ಅವರು, ಈ ಪ್ರೀತಿಯನ್ನು ಲಂಚ ಕೊಟ್ಟು ಸಂಪಾದಿಸಲು ಆಗುವುದಿಲ್ಲ. ಅದನ್ನು ಗಳಿಸಬೇಕು. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಋಣಿಯಾಗಿರುತ್ತೇನೆ ಎಂದಿದ್ದಾರೆ.
ಕೃಷ್ಣ ನಿರ್ದೇಶನದ ಪೈಲ್ವಾನ್ ಚಿತ್ರ ಆಗಸ್ಟ್ನಲ್ಲಿ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕಾಗಿ ಸುದೀಪ್ ತಮ್ಮ ದೇಹವನ್ನು ಹುರಿಗೊಳಿಸಿ ಕಂಚಿನಂತೆ ಗಟ್ಟಿಗೊಳಿಸಿದ್ದಾರೆ.
Last Updated : Jun 6, 2019, 5:27 PM IST