ಬೆಂಗಳೂರು:ಮಹಾಮಾರಿ ಕೊರೊನಾ ವೈರಸ್ ಎರಡನೇ ಅಲೆ ದೇಶಾದ್ಯಂತ ಅಬ್ಬರಿಸುತ್ತಿದ್ದು, ರಾಜಧಾನಿ ಬೆಂಗಳೂರಲ್ಲೂ ಇದರ ತೀವ್ರತೆ ಜೋರಾಗಿದೆ. ಪ್ರತಿದಿನ ಸಾವಿರಾರು ಕೋವಿಡ್ ಪ್ರಕರಣ ದಾಖಲಾಗುತ್ತಿರುವುದು ಆತಂಕ ಮೂಡಿಸಿದೆ.
ಕೊರೊನಾ ಹೆಚ್ಚಾಗುವುದಕ್ಕೆ ನಾವೇ ಕಾರಣ ಎಂದ ಜೆಕೆ! - ಜಯರಾಮ್ ಕಾರ್ತಿಕ್
ಡೆಡ್ಲಿ ವೈರಸ್ ಕೊರೊನಾ ಹೆಚ್ಚಾಗುವುದಕ್ಕೆ ನಾವೇ ಕಾರಣ ಎಂದು ಕಾರ್ತಿಕ್ ಜಯರಾಮ್ ಹೇಳಿದ್ದು, ಆಕ್ರೋಶ ವ್ಯಕ್ತಪಡಿಸಿ ವಿಡಿಯೋ ಹರಿಬಿಟ್ಟಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿರುವ ನಟ ಜಯರಾಮ್ ಕಾರ್ತಿಕ್, ಮಹಾಮಾರಿ ಕೊರೊನಾ ಹೆಚ್ಚಾಗುವುದಕ್ಕೆ ನಾವೇ ಕಾರಣ ಎಂದಿದ್ದಾರೆ. ಕೊರೊನಾ ಇಲ್ಲವೆಂದು ಮಾಸ್ಕ್, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸಿಂಗ್ ಬಳಕೆ ಮಾಡದ ಕಾರಣ ಇದೀಗ ಮತ್ತೆ ಮಹಾಮಾರಿ ಹೆಚ್ಚಾಗಿದೆ ಎಂದು ಜೆಕೆ ಬೇಸರ ಹೊರಹಾಕಿದ್ದಾರೆ.
ಜವಾಬ್ದಾರಿ ಇರುವಂತವರು ಜನರಲ್ಲಿ ಭಯ ಮೂಡಿಸಬಾರದು ಎಂದು ನಟ ಜಯರಾಮ್ ಕಾರ್ತಿಕ್ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಿದಂತೆ ವಿಡಿಯೋ ಹರಿಬಿಟ್ಟಿದ್ದಾರೆ. ಬೆಂಗಳೂರಿನಲ್ಲೂ ಕೊರೊನಾ ತೀವ್ರತೆ ಹೆಚ್ಚಾಗಿರುವ ಕಾರಣ ಆಸ್ಪತ್ರೆಗಳಲ್ಲಿ ಬೆಡ್ ಮತ್ತು ಆಕ್ಸಿಜನ್ ತೊಂದರೆ ಉಂಟಾಗಿದ್ದು, ಸಾವಿನ ಸಂಖ್ಯೆಯಲ್ಲೂ ಏರಿಕೆ ಕಂಡು ಬಂದಿದೆ.