ಕರ್ನಾಟಕ

karnataka

ETV Bharat / sitara

'ತಲೈವಿ' ಆಯ್ತು ಇದೀಗ 'ಸೀತಾ' ಚಿತ್ರದಲ್ಲಿ ನಟಿಸಲಿರುವ ಕಂಗನಾ ರಣಾವತ್ - ಕಂಗನಾ ಹೊಸ ಚಿತ್ರ ಸೀತಾ

ಝಾನ್ಸಿ ಚಿತ್ರದ ನಂತರ ಇದೀಗ ಮತ್ತೊಮ್ಮೆ ಐತಿಹಾಸಿಕ ಚಿತ್ರದಲ್ಲಿ ನಟನೆ ಮಾಡಲು ನಟಿ ಕಂಗನಾ ರಣಾವತ್ ತಯಾರಾಗಿದ್ದು, ಮುಂಬರುವ ಚಿತ್ರದ ಬಗ್ಗೆ ಘೋಷಣೆ ಮಾಡಿದ್ದಾರೆ.

Actor Kangana ranaut
Actor Kangana ranaut

By

Published : Sep 14, 2021, 7:30 PM IST

Updated : Sep 14, 2021, 7:54 PM IST

ಮುಂಬೈ: ಬಾಲಿವುಡ್ ಬ್ಯೂಟಿ ಕಂಗನಾ ರಣಾವತ್​​ 'ತಲೈವಿ' ಚಿತ್ರದಲ್ಲಿ ನಟನೆ ಮಾಡಿ ಯಶಸ್ಸು ಕಂಡಿದೆ. ಇದರ ಬೆನ್ನಲ್ಲೇ ಮತ್ತೊಂದು ಐತಿಹಾಸಿಕ ಸಿನಿಮಾದಲ್ಲಿ ನಟನೆ ಮಾಡಲು ಸನ್ನದ್ಧರಾಗಿದ್ದು, ಯಾವ ಚಿತ್ರದಲ್ಲಿ ನಟನೆ ಮಾಡಲಿದ್ದಾರೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.

ತಮ್ಮ ಮುಂಬರುವ ಚಿತ್ರದ ಬಗ್ಗೆ ಇನ್​​ಸ್ಟಾಗ್ರಾಂ ಹಾಗೂ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ ಕಂಗನಾ ರಣಾವತ್​, 'ದಿ ಇನ್​ಕಾರ್ನೇಷನ್​​ ಸೀತಾ'ದಲ್ಲಿ ನಟನೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ರಾಮಾಯಣದಲ್ಲಿ ಬರುವ ಶ್ರೀರಾಮನ ಪತ್ನಿ ಸೀತಾ ಪಾತ್ರದಲ್ಲಿ ಕಂಗನಾ ನಟನೆ ಮಾಡಲಿದ್ದಾರೆ.

ಬಿಗ್​ ಬಜೆಟ್​ನ ಸಿನಿಮಾ ಇದಾಗಿದ್ದು, ಬಾಹುಬಲಿ, ಮಗಧೀರ, ಭಜರಂಗಿ ಭಾಯ್​ಜಾನ್​​ ಸೇರಿದಂತೆ ಅನೇಕ ಸೂಪರ್​ ಹಿಟ್​​ ಸಿನಿಮಾಗಳಿಗೆ ಚಿತ್ರಕಥೆ ಬರೆದಿರುವ ಕೆ.ವಿ. ವಿಜಯೇಂದ್ರ ಪ್ರಸಾದ್​​ ಇದಕ್ಕೆ ಚಿತ್ರಕಥೆ ಬರೆದಿದ್ದು, ಅಲೌಕಿಕ್​ ದೇಸಾಯಿ ಆ್ಯಕ್ಷನ್ ಕಟ್​ ಹೇಳಲಿದ್ದಾರೆ.

ತಲೈವಿ ಚಿತ್ರದಲ್ಲಿ ನಟಿ ಕಂಗನಾ

ಚಿತ್ರಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅಲೌಕಿಕ್​ ದೇಸಾಯಿ, ಚಿತ್ರದಲ್ಲಿ ಸೀತಾ ಪಾತ್ರದಲ್ಲಿ ನಟಿ ಕಂಗನಾ ನಟನೆ ಮಾಡುತ್ತಿರುವುದು ಖುಷಿ ಮೂಡಿಸಿದೆ. ಚಿತ್ರಕ್ಕಾಗಿ ಅವರನ್ನು ಸ್ವಾಗತ ಮಾಡಲು ಸಜ್ಜಾಗಿದ್ದೇವೆ ಎಂದಿದ್ದಾರೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ಜೀವನಾಧಾರಿತ ಚಿತ್ರ 'ತಲೈವಿ' ಚಿತ್ರದಲ್ಲಿ ನಟನೆ ಮಾಡಿರುವ ಕಂಗನಾ, ಈಗಾಗಲೇ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Last Updated : Sep 14, 2021, 7:54 PM IST

ABOUT THE AUTHOR

...view details