ಕರ್ನಾಟಕ

karnataka

ETV Bharat / sitara

ಸಂತೋಷ್ ಆನಂದ್ ರಾಮ್ ಚಿತ್ರದಲ್ಲಿ ನಟ ಜಗ್ಗೇಶ್​ ನಟನೆ.. ಸ್ಕ್ರಿಪ್ಟ್​ ಕೆಲಸದಲ್ಲಿ ಬ್ಯುಸಿಯಾದ ನಿರ್ದೇಶಕ.. - ನಿರ್ದೇಶಕ ಆನಂದ್ ರಾಮ್

ಈ ನಾಲ್ಕರ ಪೈಕಿ ಒಂದು ರಂಗನಾಯಕ ಎಂಬುದು ಈಗಾಗಲೇ ಗೊತ್ತಾಗಿದೆ. ಅದು ಬಿಟ್ಟರೆ ಸಂತೋಷ್ ಆನಂದರಾಂ ನಿರ್ದೇಶನದಲ್ಲಿ ಜಗ್ಗೇಶ್ ನಟಿಸಲಿದ್ದಾರೆ ಎಂಬ ಸುದ್ದಿ ಇದೆ. ಸದ್ಯ ಸಂತೋಷ್ ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಸದ್ಯದಲ್ಲೇ ಈ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಹೊರ ಬೀಳಲಿವೆ. ಈ ಚಿತ್ರವನ್ನು ಸಹ ಹೊಂಬಾಳೆ ಫಿಲಂಸ್​​ ನಿರ್ಮಿಸುತ್ತಿದೆ..

Jaggesh
ಜಗ್ಗೇಶ್

By

Published : Aug 22, 2021, 4:01 PM IST

ಎರಡ್ಮೂರು ವರ್ಷಗಳ ಹಿಂದೆ ತೋತಾಪುರಿ ಚಿತ್ರ ಬಿಟ್ಟರೆ ನಟ ಜಗ್ಗೇಶ್ ಯಾವುದೇ ಹೊಸ ಸಿನಿಮಾ ಒಪ್ಪಿರಲಿಲ್ಲ. ಕಳೆದ ವರ್ಷವೇ ಸೆಟ್ಟೇರಿದ್ದ ರಂಗನಾಯಕನ ಚಿತ್ರದ ಚಿತ್ರೀಕರಣ ಕೋವಿಡ್‌ ಲಾಕ್‌ಡೌನ್‌ ಮತ್ತಿತರ ಕಾರಣಗಳಿಂದ ನಿಗದಿತ ಸಮಯಕ್ಕೆ ಆರಂಭವಾಗಿರಲಿಲ್ಲ. ಇದೀಗ ಮತ್ತೆ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಇದರ ಜೊತೆಗೆ ನಿರ್ದೇಶಕ ಆನಂದ್ ರಾಮ್ ಜೊತೆಗೆ ಹೊಸ ಸಿನಿಮಾದಲ್ಲಿ ಜಗ್ಗೇಶ್​ ನಟಿಸಲಿದ್ದಾರೆ.

ಜಗ್ಗೇಶ್ ರಂಗನಾಯಕ ಸೇರಿದಂತೆ ಒಟ್ಟು ನಾಲ್ಕು ಚಿತ್ರಗಳನ್ನು ಒಪ್ಪಿದ್ದಾರೆ. ಕಲಾವಿದ ಬಣ್ಣ ಹಚ್ಚದೆ ಕುಳಿತರೆ ಸತ್ವ ಕಳೆದುಕೊಂಡಂತೆ. ಲಾಕ್​ಡೌನ್​ನಿಂದಾಗಿ ಯಾವುದೇ ಹೊಸ ಚಿತ್ರಗಳನ್ನು ಒಪ್ಪಿರಲಿಲ್ಲ. ಈ ವರ್ಷ ಕೋವಿಡ್​​ ಬರದಿದ್ದರೆ ಒಂದಿಷ್ಟು ಹೊಸ ಚಿತ್ರಗಳನ್ನು ಒಪ್ಪಿಕೊಳ್ಳಬೇಕು ಎಂದುಕೊಂಡಿದ್ದೆ. ಅದಕ್ಕೆ ಸರಿಯಾಗಿ ಗುರು ಬಂದ ರಂಗನಾಯಕ ಶುರು ಮಾಡುವ ಎಂದು ಹೇಳಿದ. ಅದರ ಜೊತೆಗೆ ಇನ್ನೂ ಮೂರು ಸಿನಿಮಾಗಳನ್ನು ಒಪ್ಪಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಈ ನಾಲ್ಕರ ಪೈಕಿ ಒಂದು ರಂಗನಾಯಕ ಎಂಬುದು ಈಗಾಗಲೇ ಗೊತ್ತಾಗಿದೆ. ಅದು ಬಿಟ್ಟರೆ ಸಂತೋಷ್ ಆನಂದರಾಂ ನಿರ್ದೇಶನದಲ್ಲಿ ಜಗ್ಗೇಶ್ ನಟಿಸಲಿದ್ದಾರೆ ಎಂಬ ಸುದ್ದಿ ಇದೆ. ಸದ್ಯ ಸಂತೋಷ್ ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಸದ್ಯದಲ್ಲೇ ಈ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಹೊರ ಬೀಳಲಿವೆ. ಈ ಚಿತ್ರವನ್ನು ಸಹ ಹೊಂಬಾಳೆ ಫಿಲಂಸ್​​ ನಿರ್ಮಿಸುತ್ತಿದೆ.

ಓದಿ: ನಿರ್ದೇಶಕ ಸಂತೋಷ್ ಆನಂದ್ ರಾಮ್ ಮುಂದಿನ ಚಿತ್ರ ಯಾವ ನಟನ ಜೊತೆ ಗೊತ್ತಾ?

ಸದ್ಯ ಶ್ರುತಿ ನಾಯ್ಡು ನಿರ್ಮಾಣದ ಪ್ರೀಮಿಯರ್ ಪದ್ಮಿನಿ 2 ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಸಹ ಮುಗಿಯುವ ಹಂತಕ್ಕೆ ಬಂದಿದೆ. ಆ ಚಿತ್ರ ಸಹ ಸದ್ಯದಲ್ಲೇ ಪ್ರಾರಂಭವಾಗಲಿದೆ. ಇದಲ್ಲದೆ ನಾಲ್ಕನೆಯ ಚಿತ್ರ ಯಾವುದು ಎಂಬ ಕುತೂಹಲ ಎಲ್ಲರಲ್ಲಿ ಮೂಡಿದೆ.

ಓದಿ: ಮೆಗಾಸ್ಟಾರ್​ಗೆ ಜನ್ಮದಿನದ ಸಂಭ್ರಮ.. ಟೈಟಲ್ ಲಾಂಚ್ ಮಾಡಿದ ಮಹೇಶ್ ಬಾಬು

ABOUT THE AUTHOR

...view details