ಕರ್ನಾಟಕ

karnataka

ETV Bharat / sitara

ಡೈಲಾಗ್​​ ಹೊಡೆದು ಜನರ ಕೈಗೆ ಸಿಗದೆ ಬಚ್ಚಿಟ್ಟುಕೊಳ್ಳೊ ನಾವಲ್ಲಾ ಹೀರೋಗಳು': ಜಗ್ಗೇಶ್​​ ಹೀಗೆ ಟ್ವೀಟ್​ ಮಾಡಿದ್ಯಾಕೆ!? - ಚೀನಾ ವಸ್ತು ಬಹಿಷ್ಕಾರ

ಚೀನಾ ವಸ್ತು, ಆ್ಯಪ್​ ಬಹಿಷ್ಕಾರ ಮಾಡುವಂತೆ ಎಲ್ಲೆಡೆಯಿಂದ ಗಂಭೀರವಾದ ಕೂಗು ಕೇಳಿ ಬರುತ್ತಿದ್ದು, ಇದೀಗ ನಟ ಜಗ್ಗೇಶ್​ ಕೂಡ ಅದಕ್ಕೆ ಧ್ವನಿಗೂಡಿಸಿದ್ದಾರೆ.

Actor jaggesh tweet
Actor jaggesh tweet

By

Published : Jun 26, 2020, 9:39 PM IST

ಎಂಥ ಅದ್ಭುತ ಹೀರೋಗಳು ನೀವು! ನಿಜವಾದ ಭಾರತದ ಸೂಪರ್​​ ಸ್ಟಾರ್​​ಗಳು ನೀವೆ! ಸ್ಯಾಂಡಲ್​ವುಡ್​ನ ನವರಸ ನಾಯಕ ಜಗ್ಗೇಶ್ ಈ ರೀತಿಯಾಗಿ​ ಟ್ವೀಟ್​ ಮಾಡಿದ್ದಾರೆ.

ಭಾರತ-ಚೀನಾ ನಡುವೆ ಲಡಾಖ್​ನಲ್ಲಿ ನಡೆದ ಸಂಘರ್ಷದಲ್ಲಿ ನಮ್ಮ 20 ಯೋಧರು ಹುತಾತ್ಮರಾಗಿದ್ದು, ಅನೇಕ ಯೋಧರು ಗಾಯಗೊಂಡಿದ್ದಾರೆ. ಇದಾದ ಬಳಿಕ ಚೀನಾ ವಸ್ತುಗಳನ್ನ ಬಹಿಷ್ಕಾರ ಮಾಡಬೇಕು ಎಂಬ ಕೂಗು ಎಲ್ಲೆಡೆಯಿಂದ ಗಂಭೀರವಾಗಿ ಕೇಳಿ ಬರುತ್ತಿದೆ. ಇದಕ್ಕೆ ನಟ ಜಗ್ಗೇಶ್​ ಕೂಡ ಧ್ವನಿಗೂಡಿಸಿದ್ದಾರೆ.

ಇಂಡೋ-ಚೀನಾ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಯೋಧನ ವಿಡಿಯೋವೊಂದನ್ನ ಜಗ್ಗೇಶ್​ ತಮ್ಮ ಟ್ವೀಟರ್​ನಲ್ಲಿ ಹಾಕಿಕೊಂಡಿದ್ದಾರೆ. ಅದರಲ್ಲಿ ನಾವು ಇಂತಹ ಕಠಿಣ ಪರಿಸ್ಥಿತಿಯಲ್ಲೂ ಚೀನಾ ವಿರುದ್ಧ ಹೋರಾಡುತ್ತಿದ್ದೇನೆ. ಅದರೆ ನೀವು ಮೊಬೈಲ್​ನಲ್ಲಿ ಚೀನಾ ಆ್ಯಪ್​ ಬಳಸುತ್ತಿದ್ದು, ಚೀನಾ ವಸ್ತುಗಳನ್ನು ಬಹಿಷ್ಕರಿಸಿ ದೇಶ ಪ್ರೇಮ ಮೆರೆಯಬೇಕು ಎಂದು ಹೇಳಿದ್ದಾರೆ.

ಇದಕ್ಕೆ ತಮ್ಮ ಅಭಿಪ್ರಾಯ ಸೇರಿಸಿರುವ ನಟ, ಎಂಥ ಅದ್ಭುತ ಹೀರೋಗಳು ನೀವು! ನಿಜವಾದ ಭಾರತದ ಸೂಪರ್ ಸ್ಟಾರ್​ಗಳು ನೀವೆ! ಪರದೆ ಮೇಲೆ ಡೈಲಾಗ್ ಹೊಡೆದು ಜನರ ಕೈಗೆ ಸಿಗದೆ ಬಚ್ಚಿಟ್ಟುಕೊಳ್ಳೊ ನಾವಲ್ಲಾ ಹೀರೊಗಳು! ಒಬ್ಬ ಹೀರೂ ಕಟ್ಟಿಂಗ್ ಬಟ್ಟೆ ಸ್ಟೈಲ್ ಅನುಕರಣೆ ಬದಲು ದೇಶ ಕಾಯುವ ಈ ಹೀರೊಗಳ ಬೆಂಬಲಿಸುವ ಆತ್ಮಗೌರವ ಹೆಚ್ಚುತ್ತೆ!ಈ ಸೈನಿಕ ಹೇಳಿದಂತೆ ಚೀನಾ ವಸ್ತುಗಳನ್ನ ಬಹಿಷ್ಕರಿಸೋಣ ಎಂದಿದ್ದಾರೆ.

ABOUT THE AUTHOR

...view details