ಜಮ್ಮು - ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿರುವ ಬಿಜೆಪಿ ಸರ್ಕಾರಕ್ಕೆ ನಟ - ರಾಜಕಾರಣಿ ನವರಸ ನಾಯಕ ಜಗ್ಗೇಶ್ ಅಭಿನಂದಿಸಿದ್ದಾರೆ.
'ಅಂದು ನನ್ನನ್ನು ಹಂಗಿಸಿ, ಅಪಮಾನಿಸಿದವರಿಗೆ ಇಂದು ಉತ್ತರ ಸಿಕ್ಕಿದೆ' - 370ನೇ ವಿಧಿಗೆ ತಿಲಾಂಜಲಿ
ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದು ಮಾಡಿರುವ ಕೇಂದ್ರ ಸರ್ಕಾರಕ್ಕೆ ಕನ್ನಡದ ನಟ ಜಗ್ಗೇಶ್ ಜೈ ಎಂದಿದ್ದಾರೆ.
370ನೇ ವಿಧಿಗೆ ತಿಲಾಂಜಲಿ ಹೇಳಿರುವ ಕೇಂದ್ರ ಸರ್ಕಾರಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಜಗ್ಗೇಶ್. 12 ವರ್ಷಗಳ ಹಿಂದೆ ನಾನು ಕಂಡ ಕನಸು ಇಂದು ಸಾಕಾರವಾಯಿತು ಎಂದಿದ್ದಾರೆ. ಇದೇ ವೇಳೆ, ತಾವು ಬಿಜೆಪಿಗೆ ಸೇರುವ ವೇಳೆ ಹಂಗಿಸಿದವರಿಗೂ ಗುದ್ದು ಕೊಟ್ಟಿದ್ದಾರೆ.
ಇಂದು ಟ್ವೀಟ್ ಮಾಡಿರುವ ಜಗ್ಗೇಶ್ , '12 ವರ್ಷದ ಹಿಂದೆ ನಾನು ಭಾಜಪ ಅಪ್ಪಿದಾಗ, ನನ್ನ ಪ್ರಾಮಾಣಿಕ ಭಾವನೆ ಅರಿವಾಗದೇ ಕೆಲವರು ಹಂಗಿಸಿ ಅಪಮಾನಿಸಿದರು. ಅಂದು ನಾನು ಎಲ್ಲವನ್ನೂ ಸಹಿಸಿಕೊಂಡು ತಾಳ್ಮೆಯಿಂದ ಬಾಳಿದ್ದೆ. ಅಂದು ನಂಗೆ ದೇಶ ಮುಖ್ಯವಾಗಿತ್ತೆ ಹೊರತು, ಅಧಿಕಾರವಲ್ಲ. ನಾನು ಅಂದು ಕಂಡ ಕನಸು ಈಗ ಸಾಕಾರಗೊಂಡಿದೆ. ನಾನು ಬಿಜೆಪಿಗೆ ಸೇರಿದ್ದು ಯಾಕೆ ಎಂಬುದು ಬಹುತೇಕರಿಗೆ ಈಗ ಅರಿವಾಗಿರಬಹುದು.