ಕರ್ನಾಟಕ

karnataka

ETV Bharat / sitara

ಜಗ್ಗೇಶರ ಆ ನೋವು ಮರೆಸಿತು ಕುರುಕ್ಷೇತ್ರ ಗೆಲುವು! - ಚಾಲೆಂಜಿಂಗ್ ಸ್ಟಾರ್ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50 ನೇ ಚಿತ್ರ ಕುರುಕ್ಷೇತ್ರ ಗಳಿಕೆಯಲ್ಲಿ ದಾಖಲೆ ಬರೆದಿದೆ. 100 ಕೋಟಿ ಬಾಚಿಕೊಂಡು ಸಂಭ್ರಮಿಸುತ್ತಿದೆ. ಈ ಸಿನಿಮಾ ಗೆಲುವಿನ ಬಗ್ಗೆ ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

jaggesh

By

Published : Aug 26, 2019, 12:26 PM IST

ಕುರುಕ್ಷೇತ್ರ ಸಿನಿಮಾ ಸತತ ಎರಡು ವಾರಗಳ ಕಾಲ ಎಲ್ಲ ಚಿತ್ರಮಂದಿರಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಇತ್ತ ಗಲ್ಲಾ ಪೆಟ್ಟಿಗೆಯಲ್ಲೂ ನಾಗಾಲೋಟ ಪ್ರಾರಂಭಿಸಿರುವ ಈ ಸಿನಿಮಾ, ನೂರು ಕೋಟಿ ರೂಪಾಯಿ ಬಾಚಿಕೊಂಡು ಖುಷಿಯಿಂದ ಬೀಗುತ್ತಿದೆ.

ಕುರುಕ್ಷೇತ್ರದ ಈ ಗೆಲುವು ಕನ್ನಡ ಸಿನಿರಸಿಕರಿಗೆ ಹೆಮ್ಮೆ ತರಿಸಿದೆ. ದಾಸನ ಅಭಿಮಾನಿಗಳು ಕಾಲರ್ ಎತ್ತಿ ಕುಣಿಯವಂತೆ ಮಾಡಿದೆ. ಈ ಸಂಭ್ರಮಕ್ಕೆ ಹಿರಿಯ ನಟ ನವರಸ ನಾಯಕ ಜಗ್ಗೇಶ್ ಕೈಜೋಡಿಸಿದ್ದಾರೆ.

ವಿಜಯ ಪತಾಕೆ ಹಾರಿಸುತ್ತಿರುವ ಕುರುಕ್ಷೇತ್ರ ಗೆಲುವನ್ನು ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸಿರುವ ಜಗ್ಗೇಶ್​, ನನ್ನ ಆನಂದಕ್ಕೆ ಪಾರವೇ ಇಲ್ಲ ಎಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅನ್ಯ ರಾಜ್ಯದವರ ಆರ್ಭಟ ನೋಡಿ ನೋಡಿ ಸಾಕಾಗಿತ್ತು. ಮನಸಿನಲ್ಲಿ ಒಬ್ಬನೇ ನೋವು ನುಂಗಿ ಬದುಕುತ್ತಿದ್ದೆ. ಸದ್ಯ ಈ ನೋವು ಕುರುಕ್ಷೇತ್ರ ಗೆಲುವು ಮರೆಸಿದೆ. ನಮ್ಮ ಹುಡುಗರು ಕನ್ನಡ ಡಿಂಡಿಮವ ಭಾರಿಸಲಿ. ರಾಯರ ದಯೆಯಿಂದ ಕನ್ನಡಚಿತ್ರರಂಗ ಹೀಗೆ ಕನ್ನಡತನವನ್ನು ರಾಷ್ಟ್ರಮಟ್ಟದಲ್ಲಿ ಮೆರೆಸಲಿ ಎಂದು ಆಶಿಸುವುದಾಗಿ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details