ನವರಸನಾಯಕ ಜಗ್ಗೇಶ್ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾ ಮೂಲಕ ಸ್ಟಾರ್ ಪಟ್ಟ ಪಡೆದ ನಟ. ಮೂರು ದಶಕಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿರೋ ನಟ ಜಗ್ಗೇಶ್, ಹಿರಿಯ ಪುತ್ರ ಗುರುರಾಜ್ ಜಗ್ಗೇಶ್ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾನೆ.
ವಿಷ್ಣು ಸರ್ಕಲ್ ಸಿನಿಮಾ ಬಳಿಕ ಗುರು ರಾಜ್ ಜಗ್ಗೇಶ್ ಈಗ ಔಟ್ ಅಂಟ್ ಔಟ್ ಮಾಸ್ ಎಲಿಮೆಂಟ್ಸ್ ಹೊಂದಿರುವ, ಕಾಗೆ ಮೊಟ್ಟೆ ಎಂಬ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.
ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ 100 ಪರ್ಸೆಂಟ್ ಪ್ರೇಕ್ಷಕರಿಗೆ ಅನುಮತಿ ನೀಡಿದ ಬೆನ್ನಲ್ಲೇ ಗುರುರಾಜ್ ಜಗ್ಗೇಶ್ ಕಾಗೆಮೊಟ್ಟೆ ಸಿನಿಮಾ, ಇದೇ ಅಕ್ಟೋಬರ್ 1ಕ್ಕೆ, 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ.
ಈ ಸಿನಿಮಾ ವಿಶೇಷತೆ ಬಗ್ಗೆ ಮಾತನಾಡೋದಕ್ಕೆ ನಿರ್ದೇಶಕ ಚಂದ್ರಹಾಸ, ಗುರುರಾಜ್ ಜಗ್ಗೇಶ್ ಸೇರಿ ಇಡೀ ಕಾಗೆ ಮೊಟ್ಟೆ ಚಿತ್ರತಂಡ ಹಾಜರಿತ್ತು. ಮಗ ಗುರುರಾಜ್ ಜಗ್ಗೇಶ್ ಸಿನಿಮಾಗೆ ಸಪೋರ್ಟ್ ಮಾಡಲು ಜಗ್ಗೇಶ್ ಹಾಗೂ ಪತ್ನಿ ಪರಿಮಳ ಜಗ್ಗೇಶ್ ಈ ಪತ್ರಿಕಾಗೋಷ್ಠಿಗೆ ಬಂದಿದ್ದರು.
ಈ ಸಮಯದಲ್ಲಿ ಮಾತನಾಡಿದ ಜಗ್ಗೇಶ್ ಎರಡು ವರ್ಷದಿಂದ ಕೊರೊನಾ ಎಂಬ ಹೆಮ್ಮಾರಿ, ಚಿತ್ರರಂಗದ ಜೊತೆಗೆ ಹಲವಾರು ಕ್ಷೇತ್ರಗಳನ್ನ ಅವನತಿಗೆ ಕಾರಣವಾಗಿದೆ. ಮಗ ಗುರುರಾಜ್ ಜಗ್ಗೇಶ್ ಪ್ರತಿಭೆ ಬಗ್ಗೆ ನನಗೆ ಗೊತ್ತಿರಲಿಲ್ಲ. ನನ್ನ ಪ್ರಕಾರ ನನ್ನ ಮಗನ ಜೀವನವನ್ನ ಹಾಳು ಮಾಡಿರುವ ನೋವು ನನಗೆ ಕಾಡುತ್ತಿದೆ ಅಂತಾ ಜಗ್ಗೇಶ್ ತಮ್ಮ ನೋವನ್ನ ಹೊರ ಹಾಕಿದರು.
ನನ್ನ ಮಗನಿಗೆ ದೊಡ್ಡ ದೊಡ್ಡ ನಿರ್ದೇಶಕರು ಸಿನಿಮಾ ಮಾಡೋದಕ್ಕೆ ಬಂದಿದ್ದರು, ನಾನು ಬೇಡ ಅಂದಿದ್ದೆ. ಯಾಕೆಂದ್ರೆ, ನಮ್ಮ ಅಪ್ಪ, ನನಗೆ ಯಾವುದೇ ಸಪೋರ್ಟ್ ಮಾಡದೆ, ನಿನ್ನ ಬೆಳವಣಿಗೆ ನಿನ್ನ ಕೈಯಲ್ಲಿದೆ ಅಂತಾ ಹೇಳಿದರು. ಅದೇ ರೀತಿ ನಾನು ನನ್ನ ಮಗನಿಗೆ ಮಾಡಿದೆ, ನನ್ನ ಊಹೆ ತಪ್ಪು ಆಯಿತು. ಅಂದು ನಾನು ನನ್ನ ಮಗ ಗುರುರಾಜ್ ಜಗ್ಗೇಶ್ ಬಿಟ್ಟಿದ್ದರೆ ಇವತ್ತಿಗೆ ತೆಲುಗು ಹಾಗು ತಮಿಳು ಭಾಷೆಯಲ್ಲಿ ಒಳ್ಳೆ ನಟನಾಗುತ್ತಿದ್ದ ಅಂದರು.