ನವರಸ ನಾಯಕ ಜಗ್ಗೇಶ್ ಹಾಗೂ ನಟಿ ಕಂ ರಾಜಕಾರಣಿ ರಮ್ಯಾ ನಡುವೆ ಹಾವು-ಮುಂಗುಸಿಯಂತಹ ಧ್ವೇಷ ಇರುವುದು ಹೊಸದೇನಲ್ಲ. ಅವಕಾಶ ಸಿಕ್ಕಾಗಲೆಲ್ಲ ಸ್ಯಾಂಡಲ್ವುಡ್ ಕ್ವೀನ್ ಮೇಲೆ ದಾಳಿ ಮಾಡೇ ಬಿಡುವ ಜಗ್ಗಣ್ಣ, ಈಗ ಮತ್ತೆ ರಮ್ಯಾ ವಿರುದ್ಧ ಹರಿಹಾಯ್ದಿದ್ದಾರೆ.
ವೋಟ್ ಹಾಕದ ರಮ್ಯಾಳಿಂದ ಮತದಾನ ಕುರಿತು ಜಾಗೃತಿ... ಪದ್ಮಾವತಿಗೆ ಟಾಂಗ್ ಕೊಟ್ಟ ನಟ ಜಗ್ಗೇಶ್ - ನಟ ಜಗ್ಗೇಶ್
ಲೋಕಸಭಾ ಚುನಾವಣೆಯ ಕಾವು ಜೊರಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ರಾಜಕೀಯ ನಾಯಕ ಕೆಸರೆರಚಾಟ ಶುರುವಾಗಿದೆ. ಒಬ್ಬರನ್ನೊಬ್ಬರು ಕಾಲೆಳೆದು, ಟೀಕೆ ಮಾಡೋದು ಮಾಮೂಲಾಗಿದೆ. ಈಗ ನಟ ಜಗ್ಗೇಶ್ ನಟಿ ರಮ್ಯಾ ವಿರುದ್ಧ ಟ್ವಿಟ್ಟರ್ನಲ್ಲಿ ಕುಟುಕಿದ್ದಾರೆ.
ಲೋಕಸಭೆ ಚುನಾವಣೆಯ ರಣಕಹಳೆ ಮೊಳಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ರಮ್ಯಾ, ಹೊಸದಾಗಿ ಮತದಾನ ಮಾಡೋರು ಹೆಸರು ನೊಂದಾಯಿಸಿ ಎಂದು ತಮ್ಮ ಟ್ವಿಟ್ಟರ್ನಲ್ಲಿ ಜಾಗೃತಿ ಮೂಡಿಸಿದ್ದಾರೆ. ಅವರ ಈ ಟ್ವೀಟ್ಗೆ ಭಾರೀ ಟೀಕೆ ವಿರೋಧ ವ್ಯಕ್ತವಾಗಿದೆ. ಕಳೆದ ವಿಧಾನಸಭಾ ಹಾಗೂ ಲೋಕಸಭೆಯ ಉಪಚುನಾವಣೆಯಲ್ಲಿ ವೋಟ್ ಮಾಡದ ನೀವು, ಈಗ ಯಾವ ಮುಖವಿಟ್ಟುಕೊಂಡು ಮತದಾನದ ಜಾಗೃತಿ ಮೂಡಿಸುತ್ತಿದ್ದೀರಾ ಎಂದು ಸೋಷಿಯಲ್ ಮೀಡಿಯಾದಲ್ಲಿ ಪದ್ಮಾವತಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಇತ್ತ ಜಗ್ಗೇಶ್ ಕೂಡ ಸೋಷಿಯಲ್ ಮೀಡಿಯಾ ಟ್ರೋಲಿಗರಿಗೆ ಪರ ನಿಂತು ರಮ್ಯಾ ಅವರಿಗೆ ಮಾತಿನ ಚಾಟಿ ಬೀಸಿದ್ದಾರೆ. ಆಕೆ ಮಾನಸಿಕ ಅಸ್ವಸ್ಥೆ. ಯಾರಿಗೆ ವಂಶವಾಹಿನಿ ಅರಿವಿರುತ್ತದೋ ಅವರಿಗೆ ಜವಾಬ್ದಾರಿ ಮನುಷ್ಯರು. ಮನುಷ್ಯರಿಗೆ ಬುದ್ಧಿ ಹೇಳಬಹುದೆ ಹೊರತು ಮೃಗಕ್ಕಲ್ಲ ಎಂದು ಟ್ವಿಟ್ನಲ್ಲಿ ತಿವಿದಿರುವ ಜಗ್ಗೇಶ್, ರಮ್ಯಾ ಅವರ ವಂಶವಾಹಿನಿ ಕೆದಕಿದ್ದಾರೆ.