ಕಾಮಿಡಿ ಕಿಂಗ್ ಶಿವ ಧ್ಯಾನ... ಕಾಲ ಭೈರವನಿಗೆ ವಿಶೇಷ ಪೂಜೆ ಸಲ್ಲಿಸಿದ ಜಗ್ಗೇಶ್ - ಜಗ್ಗೇಶ್ ,
ಇಂದು ನಾಡಿನಾದ್ಯಂತ ಮಹಾಶಿವರಾತ್ರಿಯ ಸಂಭ್ರಮ ಮನೆ ಮಾಡಿದೆ. ಸ್ಯಾಂಡಲ್ವುಡ್ ತಾರೆಯರು ಸಹ ಶಿವನ ಧ್ಯಾನ ಮಾಡಿ, ಶಿವನಾಮ ಜಪಿಸಿ ಶಿವರಾತ್ರಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
![ಕಾಮಿಡಿ ಕಿಂಗ್ ಶಿವ ಧ್ಯಾನ... ಕಾಲ ಭೈರವನಿಗೆ ವಿಶೇಷ ಪೂಜೆ ಸಲ್ಲಿಸಿದ ಜಗ್ಗೇಶ್](https://etvbharatimages.akamaized.net/etvbharat/images/768-512-2603792-91-3e8e308a-2955-469e-8e4e-98e7c813ec3e.jpg)
ಕಾಲಭೈರವೇಶ್ವರವ ದೇವಾಲಯದಲ್ಲಿ ವಿಶೇಷ ಪೂಜೆ
ದೈವ ಭಕ್ತ ನವರಸ ನಾಯಕ ಜಗ್ಗೇಶ ಸಹ ಇಂದು ತಮ್ಮ ಹುಟ್ಟುರು ತುಮಕೂರಿನ ಕಾಲಭೈರವೇಶ್ವರವದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಅವರು ಮಹಾಶಿವರಾತ್ರಿ ಪ್ರಯುಕ್ತ ಕುಟುಂಬ ಸಮೇತ ಕಾಲ ಭೈರವನ ಪೂಜೆ ಮಾಡಿ ಭಕ್ತಿ ಪರಾಕಾಷ್ಟೆ ಮೆರೆದರು. ಅಲ್ಲದೇ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ನಾಡಿನ ಜನರಿಗೆ ಹಬ್ಬದ ಶುಭಾಶಯ ಹೇಳಿದ್ದಾರೆ.
ಕಾಲಭೈರವೇಶ್ವರವದೇವಾಲಯದಲ್ಲಿ ವಿಶೇಷ ಪೂಜೆ