ಜಗ್ಗೇಶ್, ಅಣ್ಣಮ್ಮ ದೇವಸ್ಥಾನದ ಪಕ್ಕದಲ್ಲಿರುವ ಅನುಪಮ ಚಿತ್ರಮಂದಿರದಲ್ಲಿ ಬೆಳಗ್ಗೆ 6 ಗಂಟೆಗೆ ಇಬ್ಬರು ಅರ್ಚಕರ ಸಮ್ಮುಖದಲ್ಲಿ ಹೋಮ ಮಾಡಿ, ಸಿಲ್ವರ್ ಸ್ಕ್ರೀನ್ಗೆ ಪೂಜೆ ಮಾಡಿಸಿದ್ದಾರೆ.
'ಪದ್ಮಿನಿ' ಗೆಲುವಿಗೆ ಚಿತ್ರಮಂದಿರಲ್ಲಿ ಹೋಮ ಮಾಡಿಸಿದ ಜಗ್ಗೇಶ್ ! - undefined
ನವರಸ ನಾಯಕ ಜಗ್ಗೇಶ್ ನಟನೆಯ 'ಪ್ರೀಮಿಯರ್ ಪದ್ಮಿನಿ' ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಚಿತ್ರದ ಗೆಲುವಿಗೆ ಜಗ್ಗೇಶ್, ಅನುಪಮಾ ಥಿಯೇಟರ್ನಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ.

ಪ್ರೀಮಿಯರ್ ಪದ್ಮಿನಿ
ಇನ್ನು ಕಿರುತೆರೆ ನಿರ್ದೇಶಕ ರಮೇಶ್ ಇಂದಿರಾ ಈ ಸಿನಿಮಾ ನಿರ್ದೇಶನ ಮಾಡಿದ್ದು, ಅರ್ಜುನ್ ಜನ್ಯ ಈ ಚಿತ್ರಕ್ಕೆ ಕ್ಯಾಚೀ ಟ್ಯೂನ್ಸ್ ಹಾಕಿದ್ದಾರೆ. ಔಟ್ ಆ್ಯಂಡ್ ಔಟ್ ಕಾಮಿಡಿ ಇರುವ ಈ ಚಿತ್ರವನ್ನ ಶೃತಿ ನಾಯ್ಡು ನಿರ್ಮಾಣ ಮಾಡಿದ್ದಾರೆ. ಜಗ್ಗೇಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇವರ ಜತೆ ಮಧುಬಾಲಾ ಕೂಡ ನಟಿಸಿದ್ದಾರೆ.