ಕೇದಾರನಾಥ್ನಿಂದ ವಾಪಸ್ ಆಗಿರುವ ಜಗ್ಗೇಶ್ ಸೀದಾ ಮೋರುಬಾಯ್ ಮನೆಗೆ ಹೋಗಿ, ಆರೋಗ್ಯ ವಿಚಾರಿಸಿದ್ದಾರೆ. ಹಾಸಿಗೆ ಹಿಡಿದಿರುವ 90 ವರ್ಷ ವಯಸ್ಸಿನ ತನ್ನ ಸಾಕುತಾಯಿ ಪಕ್ಕದಲ್ಲಿ ಕುಳಿತು ಧೈರ್ಯ ತುಂಬಿದ್ದಾರೆ.
ಸಾವಿನ ಬಾಗಿಲಿನಲ್ಲಿ ನಿಂತಿರುವ ಸಾಕುತಾಯಿ ನೆನೆದು ಕಣ್ಣೀರಾದ ಜಗ್ಗೇಶ್ - undefined
ಜೀವನ ಕೊನೆಯ ದಿನಗಳನ್ನು ಎಣಿಸುತ್ತಿರುವ ತಮ್ಮ ಸಾಕುತಾಯಿ ಮೋರುಬಾಯ್ ಅವರನ್ನು ನೆನೆದು ನಟ ಜಗ್ಗೇಶ್ ಭಾವುಕರಾಗಿದ್ದಾರೆ.
ಜಗ್ಗೇಶ್
ಈ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಜಗ್ಗೇಶ್, 'ನನಗೆ ತಿಳಿದಿದ್ದು ಶಿವಧ್ಯಾನ ಧ್ಯಾನ ಒಂದೇ. ಅದನ್ನು ಮಾಡುತ್ತಿರುವುದನ್ನ ನಿಲ್ಲಿಸಬೇಡ! ಕೈಲಾಸದಿಂದ ಇಳಿದು ಶಿವ ನಿನಗಾಗಿ ಬರುತ್ತಿದ್ದಾನೆ. ಸಾವಿನ ಲೆಕ್ಕಾಚಾರ ಜಗದ ನಿಯಮ. ನನ್ನನ್ನು ಪ್ರೀತಿಸಿಯಿಂದ ದೇವರ (ಮೋರುಬಾಯ್)ಉಸಿರು ನಿಂತ ಮೇಲೆ ತಿಳಿಸಿ ಎಂದು ಮನೆಯವರಿಗೆ ಹೇಳಿ, ಅವಳ ಸಾವು ಬರುವುದು ನೋಡಲಾಗದೇ ಬಂದುಬಿಟ್ಟೆ ಎಂದು ಭಾವುಕರಾಗಿ ಬರೆದಿದ್ದಾರೆ.