ಹಿರಿಯ ನಟ, ನವರಸ ನಾಯಕ ಜಗ್ಗೇಶ್ ಚಿತ್ರರಂಗದಲ್ಲಿ ಬರುವ ಹೊಸಬರಿಗೆ ಮಾರ್ಗದರ್ಶನ ನೀಡುತ್ತಿರುತ್ತಾರೆ. ಯುವ ಪ್ರತಿಭೆಗಳಿಗೆ ಬೆನ್ನು ತಟ್ಟಿ ಪ್ರೊತ್ಸಾಹಿಸುತ್ತಿರುತ್ತಾರೆ. ಇದೀಗ ಜಗ್ಗಣ್ಣ ಹೊಸ ಚಿತ್ರ ಎಂಆರ್ಪಿಗೆ ಸಾಥ್ ನೀಡಿದ್ದಾರೆ.
ಇದೀಗ ಜಗ್ಗೇಶ್ ಅವರ ಕಂಠದಲ್ಲಿ ಎಂಆರ್ಪಿ ಆರಂಭ ಹಾಗೂ ಅಂತ್ಯದಲ್ಲಿ ಚಿತ್ರದ ಸಂದೇಶ ಹೇಳಿದ್ದಾರೆ. ಅವರ ಧ್ವನಿಯಲ್ಲಿ ಚಿತ್ರದ ಸಂದೇಶ ಪ್ರೇಕ್ಷಕರಿಗೆ ಕೇಳಿಸಲಾಗುವುದು. ನವರಸ ನಾಯಕ ಜಗ್ಗೇಶ್ ಸ್ನೇಹಪೂರ್ವಕವಾಗಿ ಈ ಚಿತ್ರಕ್ಕೆ ಪ್ರೋತ್ಸಾಹ ನೀಡಿದ್ದಾರೆ.
ಇನ್ನು ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮಿಂಚಿದ ಹರಿ ಈ ಚಿತ್ರದಲ್ಲಿ ಸಾಫ್ಟ್ ವೇರ್ ಇಂಜನಿಯರ್ ಆಗಿ ವಾಸ್ತವಕ್ಕೆ ಕನ್ನಡಿ ಹಿಡಿಯಲಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕ ಎಂ.ಡಿ. ಶ್ರೀಧರ್, ಛಾಯಾಗ್ರಾಹಕ ಕೃಷ್ಣ ಕುಮಾರ್, ಮೋಹನ್ ಕುಮಾರ್ ಹಾಗೂ ರಂಗಸ್ವಾಮಿ ನಿರ್ಮಾಣ ಮಾಡುತ್ತಿದ್ದಾರೆ.
ನನ್ ಮಗಳೇ ಹೀರೋಯಿನ್ ಸಿನಿಮಾ ನಿರ್ದೇಶಕ ಬಾಹುಬಲಿ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಇಲ್ಲಿ ಹಾಸ್ಯಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಹರ್ಷವರ್ಧನ ಸಂಗೀತ, ಗುಂಡ್ಲುಪೇಟೆ ಸುರೇಶ್ ಈ ಚಿತ್ರದಿಂದ ಎಂ.ಎಂ ಸೂರಿ ಹೆಸರಿನಲ್ಲಿ ಛಾಯಾಗ್ರಹಣ ಮಾಡುತ್ತಿದ್ದಾರೆ. ವಿಜಯ್ ಚೆಂಡೂರ್, ಬಲ ರಜವಾಡಿ ಹಾಗೂ ಇತರರು ತಾರಾಗಣದಲ್ಲಿದ್ದಾರೆ.