ಸಂತೋಷ ಆನಂದ್ ರಾಮ್ ಆ್ಯಕ್ಷನ್ ಕಟ್ ಹೇಳುತ್ತಿರುವ 'ಯುವರತ್ನ' ಚಿತ್ರದಲ್ಲಿ ಬೊಮನ್ ಇರಾನಿ , ಟಾಲಿವುಡ್ನ ಸಯೇಷಾ, ಡಾಲಿ ಧನಂಜಯ್ ಸೇರಿದಂತೆ ಸಾಕಷ್ಟು ತಾರೆಯರು ನಟಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಈ ತಾರಾಪಟ್ಟಿ ಹೆಚ್ಚುತ್ತಲಿದೆ ಇದೆ. ಸದ್ಯ ಜಗಪತಿ ಬಾಬು ಅವರ ಹೆಸರು ಈ ಪಟ್ಟಿಗೆ ಸೇರಿಕೊಂಡಿದೆ. ಈಗಾಗಲೇ ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ಜಗಪತಿ ನಟಿಸುತ್ತಿದ್ದಾರೆ. ಈಗ ಅವರು ಯುವರತ್ನ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
'ಅವರು ನಮ್ಮ ಚಿತ್ರದಲ್ಲಿ ನಟಿಸುತ್ತಿಲ್ಲ'...ಅಂತೆ-ಕಂತೆಗೆ 'ಯುವರತ್ನ' ಅಂಕುಶ - ದೂಧ್ ಪೇಡಾ ದಿಗಂತ್
'ಯುವರತ್ನ' ಚಿತ್ರದ ತಾರಾಬಳಗ ಹೆಚ್ಚುತ್ತಿದೆ. ಇತ್ತೀಚಿಗಷ್ಟೆ ದೂಧ್ ಪೇಡಾ ದಿಗಂತ್ ಹಾಗೂ ನಟಿ ಸೋನು ಗೌಡ ಚಿತ್ರತಂಡ ಸೇರಿಕೊಂಡರು. ಈಗ ಟಾಲಿವುಡ್ ನಟ ಜಗಪತಿ ಬಾಬು ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಯುವರತ್ನ
'ಇದು ಫೇಕ್ ನ್ಯೂಸ್'
ಯುವರತ್ನ ಚಿತ್ರದಲ್ಲಿ ಜಗಪತಿ ಬಾಬು ಕಾಸ್ಟಿಂಗ್ ಸುಳ್ಳು ಸುದ್ದಿ ಎಂದು ನಿರ್ಮಾಪಕ ಕಾರ್ತೀಕ್ ಗೌಡ ಸ್ಪಷ್ಟಪಡಿಸಿದ್ದಾರೆ. ನಿನ್ನೆ ಟೀಟ್ ಮಾಡಿ ಜಗಪತಿ ಬಾಬು ಸರ್ ಯುವರತ್ನದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ, ಇದು ಫೇಕ್ ನ್ಯೂಸ್. ಅಂತಹ ಏನಾದರೂ ಸುದ್ದಿಗಳಿದ್ದರೆ ಅಧಿಕೃತವಾಗಿ ನಾವೇ ಘೋಷಿಸುತ್ತೇವೆ ಎಂದಿದ್ದಾರೆ.