ಯುವ ನಟ, ನಿರ್ದೇಶಕ ಹಾಗೂ ಬರಹಗಾರ ಗೌರಿಶಂಕರ್ ‘ಜೋಕಾಲಿ’ ಹಾಗೂ ‘ರಾಜ ಹಂಸ’ ಕನ್ನಡ ಚಿತ್ರಗಳ ನಂತರ ಈಗ ಮತ್ತೆ ಸುದ್ದಿ ಆಗಿದ್ದಾರೆ.
ವೈವಾಹಿಕ ಜೀವನಕ್ಕೆ ಕಾಲಿರಿಸಿದ ನಟ, ನಿರ್ದೇಶಕ ಹಾಗೂ ಬರಹಗಾರ ಗೌರಿಶಂಕರ್ - ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದಲ್ಲಿ ಮದುವೆ
ಗೌರಿಶಂಕರ್ ಬಾಳ ಸಂಗಾತಿಯಾಗಿ ಅರುಣಾ ಅವರ ಕೈ ಹಿಡಿದ್ದಾರೆ. ನಿನ್ನೆ ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದಲ್ಲಿ ಕೇವಲ 20 ವ್ಯಕ್ತಿಗಳ ಉಪಸ್ಥಿತಿಯಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
actor gowrishanker
ಗೌರಿಶಂಕರ್ ಬಾಳ ಸಂಗಾತಿಯಾಗಿ ಅರುಣ ಅವರ ಕೈ ಹಿಡಿದ್ದಾರೆ. ನಿನ್ನೆ ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದಲ್ಲಿ ಕೇವಲ 20 ವ್ಯಕ್ತಿಗಳ ಉಪಸ್ಥಿತಿಯಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕೊರೊನಾ ಪರಿಸ್ಥಿತಿಗೆ ಅನುಗುಣವಾಗಿಯೇ ಸರಳ ಹಾಗೂ ಶಾಸ್ತ್ರೋಕ್ತವಾಗಿ ಕುಟುಂಬದ ಸದಸ್ಯರ ಹಾಜರಾತಿಯಲ್ಲಿ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ನನ್ನ ಬಾಳ ಸಂಗಾತಿಯಾಗಿ ಅರುಣಾಳನ್ನು ಮದುವೆ ಆಗಿದ್ದೇನೆ ಎಂದು ಗೌರಿಶಂಕರ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡು ಫೋಟೋ ಶೇರ್ ಮಾಡಿದ್ದಾರೆ. ಹಿರಿಯರ ಹಾರೈಕೆ ಹಾಗೂ ಆಶೀರ್ವಾದ ಕೋರಿದ್ದಾರೆ.