ಸ್ಯಾಂಡಲ್ ವುಡ್ನ ಕ್ಯೂಟ್ ಕಪಲ್ ದಿಗಂತ್ ಹಾಗೂ ಐಂದ್ರಿತಾ ರೇ. ಬಹಳ ದಿನಗಳ ನಂತರ ಇವರಿಬ್ಬರು ಒಟ್ಟಿಗೆ ಸ್ಕ್ರೀನ್ ಶೇರ್ ಮಾಡುತ್ತಿರುವ ಚಿತ್ರ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ'. ಬಹುತೇಕ ಚಿತ್ರೀಕರಣ ಮುಗಿಸಿರುವ ಈ ಚಿತ್ರ ಸದ್ಯ ಬಿಡುಗಡೆಗೆ ಸಿದ್ದವಾಗಿದೆ.
'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಸಾಥ್ ಇದೀಗ ಈ ಚಿತ್ರದ ಮೊದಲ ಲಿರಿಕಲ್ ವಿಡಿಯೋವನ್ನ ಗೋಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಿದ್ದು, ಗೆಳೆಯ ದಿಗಂತ್ ಸಿನಿಮಾಗೆ ಒಳ್ಳೆಯದಾಗಲಿ ಎಂದು ಹಾರೈಸಿದರು. ಅಡಿಕೆ ಬೆಳಗಾರನ ಪಾತ್ರದಲ್ಲಿ ದಿಗಂತ್ ಕಾಣಿಸಿಕೊಂಡಿದ್ದು, ಕಾಮಿಡಿ ಜೊತೆಗೆ ಉತ್ತಮ ಸಂದೇಶವನ್ನ ಈ ಚಿತ್ರ ಒಳಗೊಂಡಿದೆಯಂತೆ.
ಇದನ್ನೂ ಓದಿ:ಅಡಿಕೆ ಸುಲಿದ 'ಪುಟ್ಟಗೌರಿ' ನಟಿ: ವಿಡಿಯೋ ನೋಡಿ..
ಕೆಲವು ಕಿರು ಚಿತ್ರಗಳನ್ನು ನಿರ್ದೇಶಿಸಿ ಅನುಭವವಿರುವ ವಿನಾಯಕ ಕೋಡ್ಸರ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನಿರ್ದೇಶಕ ಹೇಳುವ ಹಾಗೇ ಬಹುತೇಕ ಚಿತ್ರೀಕರಣ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸದ್ಯದಲ್ಲೇ ಮೊದಲ ಕಾಪಿ ರೆಡಿಯಾಗಲಿದ್ದು, ಚಿತ್ರಮಂದಿರಗಳು ತೆರೆದ ಮೇಲೆ ಈ ಚಿತ್ರವನ್ನು ಬಿಡುಗಡೆ ಮಾಡುವ ಪ್ಲಾನ್ನಲ್ಲಿದ್ದಾರೆ.
ಈ ಚಿತ್ರಕ್ಕೆ ಪ್ರಜ್ವಲ್ ಪೈ ಅವರ ಸಂಗೀತ ನಿರ್ದೇಶನವಿದೆ. ರವೀಂದ್ರ ಜೋಶಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ನಂದ ಕಿಶೋರ್, ಎನ್. ರಾವ್ ಛಾಯಾಗ್ರಹಣ ಹಾಗೂ ರಾಹುಲ್ ವಸಿಷ್ಠ ಅವರ ಸಂಕಲನವಿರುವ ಈ ಚಿತ್ರದ ಹಾಡುಗಳನ್ನು ವಿಶ್ವಜಿತ್ ರಾವ್ ಹಾಗೂ ತ್ರಿಲೋಕ್ ತ್ರಿವಿಕ್ರಂ ರಚಿಸಿದ್ದಾರೆ. ಚಿತ್ರಕಥೆ ಹಾಗೂ ಸಂಭಾಷಣೆ ವೇಣು ಹಸ್ರಾಳಿ ಬರೆದಿದ್ದಾರೆ. ಉಪ್ಪಿ ಎಂಟರ್ ಟೈನರ್ ಲಾಂಛನದಲ್ಲಿ ಸಿಲ್ಕ್ ಮಂಜು ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಈ ವೇಳೆ ನಟ ದಿಗಂತ್, ನಟಿ ರಂಜನಿ ರಾಘವನ್, ಲಹರಿ ವೇಲು, ನಿರ್ದೇಶಕ ವಿನಾಯಕ ಕೋಡ್ಸರ ಹಾಗು ನಿರ್ಮಾಪಕ ಸಿಲ್ಕ್ ಮಂಜು ಉಪಸ್ಥಿತರಿದ್ದರು.
ಇದನ್ನೂ ಓದಿ:ದಿಗಂತ್ ಮುಂದಿನ ಸಿನಿಮಾಕ್ಕೆ ಈ ಕಿರುತೆರೆ ನಟಿ ನಾಯಕಿ