ಸ್ಟಾರ್ ನಟರ ಮಕ್ಕಳು ಚಿತ್ರರಂಗಕ್ಕೆ ಬರುವ ಟ್ರೆಂಡ್ ಹೊಸದೇನಲ್ಲ. ಈ ಸಂಪ್ರದಾಯ ಎಲ್ಲಾ ಚಿತ್ರರಂಗದಲ್ಲೂ ಇದೆ. ಕೆಲ ತಾರೆಗಳ ಮಕ್ಕಳು ಮಗುವಾಗಿದ್ದಾಗ ಚಿತ್ರರಂಗಕ್ಕೆ ಬಂದ್ರೆ, ಮತ್ತೆ ಕೆಲವರು ದೊಡ್ಡವರಾದ್ಮೇಲೆ ಹೀರೋ ಆಗಿ ಸ್ಕ್ರೀನ್ ಮೇಲೆ ಎಂಟ್ರಿ ಕೊಡ್ತಾರೆ. ಇದೀಗ ನಟ ಗಣೇಶ್ ಹಾಗೂ ಪತ್ನಿ, ನಿರ್ಮಾಪಕಿ ಶಿಲ್ಪಾ ಪುತ್ರ ವಿಹಾನ್ ಬಾಲ ನಟನಾಗಿ ಗಾಂಧಿನಗರದಲ್ಲಿ ಮೋಡಿ ಮಾಡಲು ರೆಡಿಯಾಗಿದ್ದಾನೆ.
ಈ ಹಿಂದೆ 'ಗೀತಾ' ಸಿನಿಮಾದಲ್ಲಿ ತಂದೆ ಗಣೇಶ್ ಜೊತೆ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ವಿಹಾನ್ ಈಗ 'ಸಖತ್' ಸಿನಿಮಾ ಮೂಲಕ ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚೋದಿಕ್ಕೆ ಸಿದ್ಧತೆ ನಡೆಸುತ್ತಿದ್ದಾನೆ. ಸಿಂಪಲ್ ಸುನಿ ನಿರ್ದೇಶನದ 'ಸಖತ್' ಚಿತ್ರದಲ್ಲಿ ಗಣೇಶ್ ಕಣ್ಣು ಕಾಣದ ವ್ಯಕ್ತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಗಣೇಶ್ ಅವರ ಚಿಕ್ಕವಯಸ್ಸಿನ ಪಾತ್ರವನ್ನು ವಿಹಾನ್ ನಿಭಾಯಿಸಲಿದ್ದಾನೆ.