ಗಣೇಶ್ ಹೀರೋ ಆಗಿ ಅಭಿನಯಿಸಿದ ಮೊದಲ ಚಿತ್ರ ‘ಚೆಲ್ಲಾಟ’. ನಿನ್ನೆ ದಿನ ಈ ಚಿತ್ರ ಸರಿಯಾಗಿ 15 ವರ್ಷಗಳ ಹಿಂದೆ ಮೇನಕಾ ಮತ್ತು ಇನ್ನಿತರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಮಲಯಾಳಂನ ರೀಮೇಕ್ ಆದ ಈ ಚಿತ್ರ ಹಿಟ್ ಆಗಿ 100 ದಿನ ಪ್ರದರ್ಶನ ಸಹ ಕಂಡಿತ್ತು. ಆ ನಿಟ್ಟಿನಲ್ಲಿ ಗಣೇಶ್‍ಗೆ ನಿನ್ನೆ ಬಹಳ ಮುಖ್ಯವಾದ ದಿನ.
‘ಗೋಲ್ಡನ್ ಸ್ಟಾರ್’ ಗಣೇಶ್ ಹೀರೋ ಆಗಿ 15 ವರ್ಷಗಳಾದವಾ? - ನಟ ಗಣೇಶ್,
‘ಗೋಲ್ಡನ್ ಸ್ಟಾರ್’ ಗಣೇಶ್ ಪಾಲಿಗೆ ನಿನ್ನೆ ಬಹಳ ಮುಖ್ಯವಾದ ದಿನ. ಏಕೆಂದರೆ ಗಣೇಶ್ ಚಿತ್ರರಂಗಕ್ಕೆ ಬಂದು ನಿನ್ನೆಗೆ 15 ವರ್ಷಗಳಾಗಿವೆ.

ಗಣೇಶ್ ಹೀರೋ ಆಗಿ 15 ವರ್ಷಗಳದರೂ ಅವರು ಚಿತ್ರರಂಗಕ್ಕೆ ಬಂದು ಇನ್ನೂ ಜಾಸ್ತಿ ಸಮಯವಾಗಿದೆ. 2002ರಲ್ಲಿ ಬಿಡುಗಡೆಯಾದ ಬಿ.ಸುರೇಶ್ ನಿರ್ದೇನದ `ಟಪೋರಿ' ಚಿತ್ರದಲ್ಲಿ ನಟಿಸುವ ಮೂಲಕ ಗಣೇಶ್ ಚಿತ್ರರಂಗಕ್ಕೆ ಬಂದಿದ್ದು ಗೊತ್ತೇ ಇದೆ. ನಂತರದ ದಿನಗಳಲ್ಲಿ ಅವರು `ಹುಡುಗಿಗಾಗಿ', `ಗೇಮ್', `ಅಬ್ಬಬ್ಬಾ ಎಂಥಾ ಹುಡುಗ', `ಬಾ ಬಾರೋ ರಸಿಕ', `ಮಸಾಲ', `ಅಮೃತಧಾರೆ', `ಅಹಂ ಪ್ರೇಮಾಸ್ಮಿ' ಮುಂತಾದ ಚಿತ್ರಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ `ಚೆಲ್ಲಾಟ' ಮೂಲಕ ಹೀರೋ ಆದ ಗಣೇಶ್ ಮತ್ತೆ ಹಿಂದಿರುಗಿ ನೋಡಲಿಲ್ಲ.
ನಾಯಕನಾಗಿ 15 ವರ್ಷ ಪೂರೈಸಿದ ಹಿನ್ನೆಲೆ ಟ್ವೀಟ್ ಮಾಡಿರುವ ಗಣೇಶ್, `ಚೆಲ್ಲಾಟ ಬಿಡುಗಡೆಯಾಗಿ 15 ವಸಂತಗಳಾಗಿವೆ. ನಿಮ್ಮ ಅಭಿಮಾನದ ಆರೈಕೆಯಲ್ಲಿ ಬೆಳೆದವನು ನಾನು. ಇದೇ ಪ್ರೀತಿ, ಅಭಿಮಾನ ನನಗೆ ಆಶೀರ್ವಾದವಾಗಿರಲಿ. ಕೊರೊನಾ ಸಂಕಷ್ಟದಲ್ಲಿ ಜೋಪಾನವಾಗಿರೋಣ. ಇತರರ ಕಷ್ಟಗಳಿಗೆ ಸ್ಪಂದಿಸೋಣ' ಎಂದು ಗಣೇಶ್ ಟ್ವೀಟ್ ಮಾಡಿದ್ದಾರೆ.