'ಸಲಗ' ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಹಲವಾರು ವಿಶೇಷತೆಗಳಿಗೆ ಕಾರಣವಾಗಿದೆ. ಈ ಚಿತ್ರದ ಮೂಲಕ ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ. ಇದ್ರ ಜೊತೆಗೆ ವಿಜಯ್ ಅಭಿನಯ ಮಾಡುತ್ತಿರುವ ರೌಡಿಂ ಸಿನಿಮಾ ಸಲಗ. ಈಗಾಗಲೇ ಚಿತ್ರದ ಟೀಸರ್ ಹಾಗು ಹಾಡುಗಳಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಇದೀಗ ದುನಿಯಾ ವಿಜಯ್ ಅಭಿಮಾನಿ ವೀರೇಶ್ ಆಚಾರ್ ಸಲಗ ಸಿನಿಮಾ ಬಗ್ಗೆ ಶಾಸನ ರಚನೆ ಮಾಡಿ ಗಮನ ಸೆಳೆದಿದ್ದಾರೆ.
ವಿಡಿಯೋ: 'ಸಲಗ ಶಾಸನ' ಬರೆದ ದುನಿಯಾ ವಿಜಯ್ ಅಭಿಮಾನಿ - duniya vijay salaga movie
ಬಳ್ಳಾರಿಯ ವೀರೇಶ್ ಆಚಾರ್ ಸಲಗ ಸಿನಿಮಾ ಬಗ್ಗೆ ಶಾಸನ ರಚನೆ ಮಾಡಿದ್ದಾರೆ. ಇವರು ರಚನೆ ಮಾಡಿರುವ ಶಾಸನದಲ್ಲಿ ಸಿನಿಮಾದ ಟೈಟಲ್ ಸೇರಿದಂತೆ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರ ಹೆಸರುಗಳನ್ನು ಕೆತ್ತಿದ್ದಾರೆ.
Video : 'ಸಲಗ ಶಾಸನ' ಬರೆದ ದುನಿಯಾ ವಿಜಯ್ ಅಭಿಮಾನಿ
ಓದಿ : ’’ಬದುಕಿದ್ದಾಗ ಅವರ ಬಗ್ಗೆ ಮಾತನಾವುದು ಗಂಡಸ್ತನ’’: ತೆಲುಗು ನಟನಿಗೆ ಕಿಚ್ಚ ವಾರ್ನ್
ಈ 'ಸಲಗ ಶಾಸನ' ದುನಿಯಾ ವಿಜಯ್ಗೆ ಸರ್ಪ್ರೈಸ್ ಗಿಫ್ಟ್ ಆಗಿದೆ. ಇದನ್ನು ರಚನೆ ಮಾಡಲು ವೀರೇಶ್ಗೆ 35 ಸಾವಿರ ಖರ್ಚಾಗಿದೆಯಂತೆ. ಚಿತ್ರಕ್ಕೆ ದುನಿಯಾ ವಿಜಯ್ ಆ್ಯಕ್ಷನ್, ಕಟ್ ಹೇಳುತ್ತಿದ್ದು, ಚಿತ್ರದಲ್ಲಿ ಡಾಲಿ ಧನಂಜಯ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆ.ಪಿ ಶ್ರೀಕಾಂತ್ ನಿರ್ಮಾಣವಿರುವ ಈ ಚಿತ್ರ ಹೊಸ ವರ್ಷಕ್ಕೆ ದರ್ಶನ ಕೊಡೋ ಸಾಧ್ಯತೆ ಇದೆ.