ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕಿಗೊಳಗಾಗಿದ್ದ ನಟ ದುನಿಯಾ ವಿಜಯ್ ತಂದೆ-ತಾಯಿ ಇದೀಗ ಅದರ ವಿರುದ್ಧದ ಹೋರಾಟದಲ್ಲಿ ಜಯ ಕಂಡಿದ್ದಾರೆ. ಜನ್ಮ ಕೊಟ್ಟ ಪೋಷಕರನ್ನ ಯಾವ ರೀತಿಯಾಗಿ ಕಾಪಾಡಿಕೊಂಡಿದ್ದಾರೆಂಬ ಕುರಿತು ನಟ ಮಾಹಿತಿ ಹಂಚಿಕೊಂಡಿದ್ದಾರೆ.
ಕೋವಿಡ್ ಗೆದ್ದ ದುನಿಯಾ ವಿಜಿ ಪೋಷಕರು ಎರಡನೇ ಹಂತದ ಕೋವಿಡ್ ಶ್ರೀಮಂತರು, ಬಡವರು ಹಾಗೂ ಸಿನಿಮಾ ತಾರೆಯರು, ಗಣ್ಯ ವ್ಯಕ್ತಿಗಳು ಎಂಬ ಭೇದ-ಭಾವ ಇಲ್ಲದೇ ಎಲ್ಲರ ಪ್ರಾಣ ಕಸಿಯುತ್ತಿದೆ. ಡೆಡ್ಲಿ ವೈರಸ್ಗೆ ಈಗಾಗಲೇ ಕನ್ನಡ ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಬಲಿಯಾಗಿದ್ದಾರೆ. ಇದೀಗ ನಟ ದುನಿಯಾ ವಿಜಯ್ ಈ ಕೊರೊನಾ ಬಗ್ಗೆ, ಅದ್ರಲ್ಲೂ ತಮಗೆ ಜನ್ಮ ಕೊಟ್ಟ ತಂದೆ-ತಾಯಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಆ ಸಮಯದಲ್ಲಿ ದುನಿಯಾ ವಿಜಯ್ ಅವರನ್ನ ಉಳಿಸಿಕೊಳ್ಳಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ.
ಬೆಂಗಳೂರಿನ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಸಿಗದ ಕಾರಣ ಮನೆಯಲ್ಲೇ ದುನಿಯಾ ವಿಜಯ್ ಪೋಷಕರಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಕೊರೊನಾ ಪಾಸಿಟಿವ್ ವ್ಯಕ್ತಿಗಳು ನಿಧನ ಹೊಂದಿದಾಗ, ಮಕ್ಕಳ ಸಂಬಂಧಿಕರು ಅವ್ರನ್ನ ನೋಡೋದಿಕ್ಕೆ ಬರುವುದಿಲ್ಲ.ಇಂತಹ ಸಮಯದಲ್ಲಿ ನಟ ವಿಜಯ್, ಪತ್ನಿ ಕೀರ್ತಿ ಮತ್ತು ಮಗ ಸೇರಿಕೊಂಡು ಪೋಷಕರ ಆರೈಕೆ ಮಾಡಿದ್ದಾರೆ. ಅದರಲ್ಲಿ, ನಮ್ಮ ತಂದೆ ತಾಯಿಯನ್ನು ಕರೆದುಕೊಂಡು ಹೋಗಲು ಬಂದಿದ್ದ ಕ್ರೂರಿ ಕೊರೊನಾ ಜೊತೆ ಸೆಣೆಸಾಡಲು ನಿಂತೆವು ಅಂತಾ ವಿಜಯ್ ವಿಡಿಯೋ ಮೂಲಕ ಫೇಸ್ಬುಕ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಮಾನಸಿಕವಾಗಿ ನಾನು ನಂಬಿದ ಗುರುಗಳು ನನ್ನ ಜತೆಯಲ್ಲಿದ್ದರೆ, ದೈಹಿಕವಾಗಿ ನಮ್ಮ ಜೊತೆ ಆರೋಗ್ಯ ಶುಶ್ರೂಷಕ ಈಶ್ವರ್ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಅರ್ಧಗಂಟೆ ಬಂದು ಹೋಗುತ್ತಿದ್ದರು. ನಮ್ಮ ತಂದೆ ಈಗಾಗಲೇ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಅದರಲ್ಲಿ ಈ ಕೊರೊನಾ ಅವರನ್ನು ತುಂಬಾ ಬಳಲುವಂತೆ ಮಾಡಿತು. ನಮ್ಮ ತಾಯಿ ಎರಡು ಮೂರು ದಿನದಲ್ಲಿ ಚಿಕಿತ್ಸೆಗೆ ಸ್ಪಂದಿಸಲು ಪ್ರಾರಂಭಿಸಿದರು. ದುನಿಯಾ ವಿಜಿ ಹೇಳುವ ಹಾಗೇ, ಈ ಕೊರೊನಾಗೆ ಧೃತಿಗೇಡಬೇಡಿ ಅನ್ನೋದು. ಕೊರೊನಾ ಬಂತು ಎಂದು ಧೈರ್ಯ ಕಳೆದುಕೊಳ್ಳಬೇಡಿ. ತಂದೆ-ತಾಯಿಯರನ್ನು ಕೈಬಿಡಬೇಡಿ. ನನ್ನ ತಂದೆ-ತಾಯಿ ಬದುಕಿದ್ದಾರೆ ಎಂಬ ಖುಷಿಯಿಂದ ಈ ಘಟನೆಯನ್ನು ಹಂಚಿಕೊಳ್ಳುತ್ತಿಲ್ಲ, ಎಷ್ಟೋ ಜನ ನನ್ನ ರೀತಿ ಸೇವೆ ಮಾಡಿ ತಂದೆ-ತಾಯಿಯನ್ನು ಕಳೆದುಕೊಂಡವರಿದ್ದಾರೆ. ಅವರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಆದರೆ ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ. ಸಕಾರಾತ್ಮಕವಾಗಿ ಯೋಚಿಸಿ ಈ ಕೊರೊನಾ ವಿರುದ್ಧ ಗೆಲ್ಲೋಣ. ಜತೆಗೆ ನನ್ನ ಜೀವನದಲ್ಲಿ ನಡೆದ ಈ ಘಟನೆ ಕೆಲವರಿಗೆ ಸ್ಪೂರ್ತಿಯಾಗುತ್ತದೆ ಎಂಬ ಕಾರಣಕ್ಕೆ ವಿಡಿಯೋ ಹಂಚಿಕೊಂಡಿದ್ದೇನೆ ಎಂದಿದ್ದಾರೆ.