ಕರ್ನಾಟಕ

karnataka

ETV Bharat / sitara

ಸಲಗ ಚಿತ್ರವನ್ನ ತುಳಿಯುವ ಹುನ್ನಾರ ನಡೆಯುತ್ತಿದೆ: ದುನಿಯಾ ವಿಜಯ್ ಆಕ್ರೋಶ - Salaga Movie

ಸಲಗ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದರೆ ಈ ಚಿತ್ರಕ್ಕೆ ತೊಂದರೆ ನೀಡುವ ಪ್ರಯತ್ನ ಕೂಡ ಕೆಲವರಿಂದ ಆಗುತ್ತಿದೆ ಎಂದು ನಟ ದುನಿಯಾ ವಿಜಯ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Salaga Movie
ಸಲಗ ಚಿತ್ರ

By

Published : Oct 21, 2021, 7:08 PM IST

ಕೆಲವರಿಂದ ಸಲಗ ಚಿತ್ರಕ್ಕೆ ತೊಂದರೆ ನೀಡುವ ಪ್ರಯತ್ನ ಆಗುತ್ತಿದೆ. ಚಿತ್ರವನ್ನು ಏನೇ ಮಾಡಿದರೂ ನಿಲ್ಲಿಸಲು ಆಗಲ್ಲ. ಅದು ಹೋಗಿದ್ದೇ ದಾರಿ. ಸುಖಾಸುಮ್ಮನೆ ಸಣ್ಣತನ ತೋರಿಸುತ್ತಿದ್ದಾರೆ ಎಂದು ನಟ ದುನಿಯಾ ವಿಜಯ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿರುವ ಸಲಗ ಸಿನಿಮಾ, ಕಳೆದ ಅ.14ರಂದು ಬಿಡುಗಡೆಯಾಗಿದ್ದು, ಎಲ್ಲಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕೆ.ಜಿ ರಸ್ತೆಯಲ್ಲಿರುವ ತ್ರಿವೇಣಿ ಚಿತ್ರಮಂದಿರದಲ್ಲಿ ಒಂದು ವಾರದಿಂದ ಸಲಗ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ತ್ರಿವೇಣಿ ಚಿತ್ರಮಂದಿರದಲ್ಲಿ ಒಂದು ವಾರದಿಂದ ಸಲಗ ಸಿನಿಮಾ ಯಶಸ್ವಿ ಪ್ರದರ್ಶನ

ಆದರೆ, ತ್ರಿವೇಣಿ ಚಿತ್ರಮಂದಿರ ಜಾಗಕ್ಕೆ 'ರಿಯಲ್ ಎಸ್ಟೇಟ್' ಎಂಬ ಹೊಸ ಸಿನಿಮಾವನ್ನು ನಾಳೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿತ್ತು. ರಿಯಲ್ ಎಸ್ಟೇಟ್ ಚಿತ್ರ ನಿರ್ಮಾಪಕ ರಾಮಕೃಷ್ಣಪ್ಪ ಎಂಬುವರು, ಸಲಗ ಚಿತ್ರತಂಡ ನಮ್ಮ ಸಿನಿಮಾಗೆ ಚಿತ್ರಮಂದಿರ ಬಿಟ್ಟು ಕೊಡುತ್ತಿಲ್ಲ ಎಂದು ಉಪ್ಪಾರ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.

ಈ ವಿಷಯವನ್ನ ತಿಳಿದ ನಟ, ನಿರ್ದೇಶಕ ದುನಿಯಾ ವಿಜಯ್, ರಿಯಲ್ ಎಸ್ಟೇಟ್ ಸಿನಿಮಾ ನಿರ್ಮಾಪಕ ರಾಮಕೃಷ್ಣಪ್ಪ ಜತೆ ಮಾತನಾಡಿ ಸಮಸ್ಯೆ ಬಗೆ ಹರಿಸಿಕೊಂಡಿದ್ದಾರೆ. ತ್ರಿವೇಣಿಯಲ್ಲಿ ಬಿಡುಗಡೆಯಾಗಬೇಕಿದ್ದ ರಿಯಲ್ ಎಸ್ಟೇಟ್ ಸಿನಿಮಾ ನಾಳೆ, ಪಕ್ಕದಲ್ಲಿರುವ ಅನುಪಮ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ. ಈ ಮೂಲಕ ದುನಿಯಾ ವಿಜಯ್, ನಿರ್ಮಾಪಕ ರಾಮಕೃಷ್ಣಪ್ಪ ಜತೆ ಸಮಸ್ಯೆಯನ್ನ ಬಗೆಹರಿಸಿಕೊಂಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ದುನಿಯಾ ವಿಜಯ್, ಸಲಗ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದರೆ ಈ ಚಿತ್ರಕ್ಕೆ ತೊಂದರೆ ನೀಡುವ ಪ್ರಯತ್ನ ಕೂಡ ಕೆಲವರಿಂದ ಆಗುತ್ತಿದೆ. ಸಲಗ ವಿರುದ್ಧ ಬೇರೆ ಸಿನಿಮಾ ತಂಡದವರನ್ನು ಎತ್ತಿಕಟ್ಟುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:'ಸಲಗ' ಒಂದು ವಾರದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಗೊತ್ತಾ?

ABOUT THE AUTHOR

...view details