ಕರ್ನಾಟಕ

karnataka

ETV Bharat / sitara

ಸ್ಯಾಂಡಲ್​ವುಡ್​ನಲ್ಲಿ ನಾಯಕತ್ವ ಕೊರತೆ: ಅಣ್ಣಾವ್ರ ಅಂದಿನ ಕಾರ್ಯ ನೆನಪಿಸಿತು ಈ ಪತ್ರ..! - ಚಿತ್ರರಂಗದಲ್ಲಿ ನಾಯಕತ್ವದ ಕೊರತೆ

ಅಂದು ಡಾ. ರಾಜ್ ಕುಮಾರ್ ಅವರು ರವಿಚಂದ್ರನ್ ಪರವಾಗಿ ನಿಂತು ಸಮಸ್ಯೆಯನ್ನ ಬಗೆಹರಿಸಿದರು. ಅಣ್ಣಾವ್ರು ಮಾಡಿದ ಆ ಕೆಲಸ ಚಿತ್ರರಂಗದರು ನಾವೆಲ್ಲ ಒಂದೇ ಎಂಬ ಭಾವನೆ ಮೂಡಿಸಿತ್ತು. ಆದರೆ ಇಂದು ಕನ್ನಡ ಚಿತ್ರರಂಗ ಸರಿಯಾದ ನಾಯಕನಿಲ್ಲದೆ ದಿಕ್ಕು ತಪ್ಪುತ್ತಿದೆ. ರಾಜ್​​ಕುಮಾರ್ ಅವರು ಅಂದು ರವಿಚಂದ್ರನ್ ಪರವಾಗಿ ಮಾತನಾಡಿ ಬರೆದಿದ್ದ ಪತ್ರ ಈಗ ವೈರಲ್ ಆಗಿದೆ.

actor-dr-rajkumar-latter-viral
ರಾಜ್ ಕುಮಾರ್

By

Published : Jul 19, 2021, 4:02 PM IST

Updated : Jul 19, 2021, 4:10 PM IST

ಕನ್ನಡ ಚಿತ್ರರಂಗದಲ್ಲಿ ನಾಯಕತ್ವದ ಕೊರತೆ ಇದೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಅದಕ್ಕೆ ಉದಾರಹಣೆ ಎಂಬಂತೆ ಕಳೆದ ಒಂದು ವಾರದಿಂದ ಸಂಚಲನ ಸೃಷ್ಟಿಸಿರುವ 25 ಕೋಟಿ ರೂ. ಶ್ಯೂರಿಟಿ ವಿಚಾರ ಹಾಗೂ ನಟ ದರ್ಶನ್​​ ಮತ್ತು ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಧ್ಯೆ ನಡೆಯುತ್ತಿರುವ ಮಾತಿನ ಸಮರ.

ಡಾ. ರಾಜ್​​ಕುಮಾರ್​ ಬರೆದಿದ್ದ ಪತ್ರ

ಇಂತಹ ಸಮಯದಲ್ಲಿ ಚಿತ್ರರಂಗದ ಹಿರಿಯ ನಾಯಕರು ಅಂತಾ ಇದ್ದಿದ್ರೆ, ಈ ಸಮಸ್ಯೆಯನ್ನು ಬಗೆಹರಿಸುವ ಕೆಲಸ ಆಗುತ್ತಿತ್ತು. ಆದರೆ ಚಿತ್ರರಂಗದಲ್ಲಿ ನಾಯಕತ್ವದ ಕೊರತೆ ಇರೋದ್ರಿಂದ ದರ್ಶನ್ ಮತ್ತು ಇಂದ್ರಜಿತ್ ಲಂಕೇಶ್ ಪ್ರಕರಣ ದೊಡ್ಡದಾಗಿ ಬೆಳೆಯುತ್ತಲೇ ಇದೆ.

ಈ ಸಮಯದಲ್ಲಿ ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್​, ಶಂಕರ್ ನಾಗ್ ಕಾಲದಲ್ಲಿ ಇದ್ದಂತಹ ಚಿತ್ರರಂಗದ ಒಗ್ಗಟ್ಟು ನೆನಪಾಗುತ್ತೆ. ಅಂದು ರಾಜ್ ಕುಮಾರ್ ಮಾತಿಗೆ ಇಡೀ ಕನ್ನಡ ಚಿತ್ರರಂಗ ಹಾಗು ನಟ, ನಟಿಯರು ಬೆಲೆ ಕೊಡುತ್ತಿದ್ದರು. ಈ ಮಾತಿಗೆ ಪೂರಕ ಎಂಬಂತೆ 1989ರಲ್ಲಿ ನಟ ರವಿಚಂದ್ರನ್ ವಿವಾದದಲ್ಲಿ ಸಿಲುಕಿಕೊಂಡಿದ್ದಾಗ, ರಾಜಣ್ಣ ಅವರು ಮಧ್ಯಸ್ಥಿಕೆ ವಹಿಸಿ, ವಿವಾದ ಇತ್ಯರ್ಥ ಮಾಡಿದ್ದ ಸಂಗತಿ ನೆನಪಾಗುತ್ತದೆ.

ಅಂದು ಡಾ. ರಾಜ್​ಕುಮಾರ್ ಅವರು ರವಿಚಂದ್ರನ್ ಪರವಾಗಿ ನಿಂತು ಸಮಸ್ಯೆ ಬಗೆಹರಿಸಿದ್ದರು. ಅಣ್ಣಾವ್ರು ಮಾಡಿದ ಆ ಕೆಲಸ ಚಿತ್ರರಂಗದರು ನಾವೆಲ್ಲ ಒಂದೇ ಎಂಬ ಭಾವನೆ ಮೂಡಿಸಿತ್ತು. ಆದರೆ ಇಂದು ಕನ್ನಡ ಚಿತ್ರರಂಗ ಸರಿಯಾದ ನಾಯಕನಿಲ್ಲದೆ ದಿಕ್ಕು ತಪ್ಪುತ್ತಿದೆ.

Last Updated : Jul 19, 2021, 4:10 PM IST

ABOUT THE AUTHOR

...view details