ಕರ್ನಾಟಕ

karnataka

ETV Bharat / sitara

ಹಣ ಗಳಿಸುವುದೇ ಮುಖ್ಯವಲ್ಲ, ವಿಶ್ವಾಸ ಗಳಿಸಬೇಕು : ನಟ ದೊಡ್ಡಣ್ಣ - actor doddanna news

ಇಂದಿನ ದಿನದಲ್ಲಿ ಹಣ ಗಳಿಸುವುದು ಮಹತ್ವದ ಸಂಗತಿ ಅಲ್ಲ. ವಿಶ್ವಾಸ ಗಳಿಸುವುದು ಅಗತ್ಯವಿದೆ. ಕೋಟಿ ಕೋಟಿ ಹಣ ಗಳಿಸಿದವರು ಇದ್ದಾರೆ. ಆದರೆ, ಸಹಾಯ ಮಾಡುವುದಿಲ್ಲ..

ಹಣ ಗಳಿಸುವುದೇ ಮುಖ್ಯವಲ್ಲ, ವಿಶ್ವಾಸ ಗಳಿಸಬೇಕು : ದೊಡ್ಡಣ್ಣ
ಹಣ ಗಳಿಸುವುದೇ ಮುಖ್ಯವಲ್ಲ, ವಿಶ್ವಾಸ ಗಳಿಸಬೇಕು : ದೊಡ್ಡಣ್ಣ

By

Published : Jan 27, 2021, 11:02 PM IST

ಬಾಗಲಕೋಟೆ : ಅಹಂ ಭಾವನೆ ಬಿಟ್ಟು, ದಾನ ಧರ್ಮ ಮಾಡುತ್ತಾ ಸಾಮಾಜಿಕ ಸೇವೆ ಮಾಡುವವರು ಸುಖ, ಸಂತೋಷದಿಂದ ಇರುತ್ತಾರೆ ಎಂದು ಚಲನಚಿತ್ರ ನಟ ದೊಡ್ಡಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಆರ್ಯ ವೈಶ್ಯ ಸಂಘಟನೆ ವತಿಯಿಂದ ನಗರೇಶ್ವರ ದೇವಸ್ಥಾನದಲ್ಲಿ ಎಸ್ ಎಲ್ ಕೋರಾ ವಕೀಲರ 25ನೇ ವರ್ಷದ ವೈವಾಹಿಕ ಜೀವನ ಅಂಗವಾಗಿ 25 ಸಾಧಕ ದಂಪತಿಗೆ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂದಿನ ದಿನದಲ್ಲಿ ಹಣ ಗಳಿಸುವುದು ಮಹತ್ವದ ಸಂಗತಿ ಅಲ್ಲ. ವಿಶ್ವಾಸ ಗಳಿಸುವುದು ಅಗತ್ಯವಿದೆ. ಕೋಟಿ ಕೋಟಿ ಹಣ ಗಳಿಸಿದವರು ಇದ್ದಾರೆ. ಆದರೆ, ಸಹಾಯ ಮಾಡುವುದಿಲ್ಲ.

ಹಣ ಗಳಿಸುವುದೇ ಮುಖ್ಯವಲ್ಲ, ವಿಶ್ವಾಸ ಗಳಿಸಬೇಕು : ನಟ ದೊಡ್ಡಣ್ಣ

ಆದರೆ, ಕೋರಾ ವಕೀಲರು ತಮ್ಮ ಮನೆಯಲ್ಲಿ ಸಂಭ್ರಮ ಮಾಡಿಕೊಳ್ಳದೇ, ಇಡೀ ಸಮಾಜದಲ್ಲಿಯೇ ಸಾಧಕರಿಗೆ ಸನ್ಮಾನ ಮಾಡಿಕೊಳ್ಳುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ ಎಂದರು. ನಾನು ಸಹ ಸಾರ್ಥಕ ಜೀವನ ಮೂಲಕ ದೇವರನ್ನು ಕಾಣುತ್ತೇನೆ. ಕೊರೊನಾ ರೋಗ ಎಂಬುದು ಸುಳ್ಳು. ಸುಳ್ಳನೇ ಹೆಚ್ಚು ಜನರು ನಂಬುತ್ತಾರೆ. ಸೂಕ್ಷ್ಮ ಜೀವಿಗೆ ಹೆದರುವುದು ಅಗತ್ಯವಿಲ್ಲ. ಆದರೆ, ಕೊರೊನಾದಿಂದ ಕುಟುಂಬದಲ್ಲಿ ಒಗ್ಗಟ್ಟು ಮೂಡಿಸಿತು.

ಸದಾ ಜಂಟಾಟ ದಿಂದ ಶಾಂತಿ ನೆಮ್ಮದಿ ಸಿಗುವಂತಾಗಿರುವುದು ಮಾತ್ರ ಸತ್ಯ. ಡಾ.ರಾಜಕುಮಾರ, ವಿಷ್ಣುವರ್ಧನ್ ಹಾಗೂ ಅಂಬರೀಶ್ ಜೊತೆಗೆ ನಟನೆ ಮಾಡಿರುವ ಬಗ್ಗೆ ನೆನೆದು, ಅಂತಹ ಮಹಾನಭಾವರ ಜೊತೆಗೆ ನಟಿಸಿರುವ ಸಾರ್ಥಕವಾಗಿದೆ ಎಂದರು. ಇದೇ ಸಮಯದಲ್ಲಿ ಮಾತನಾಡಿ ಅವರು, ಮೊಬೈಲ್​​ನಿಂದ ಮಕ್ಕಳು ಹಾಳಾಗುತ್ತಿದ್ದು, ಹೆಚ್ಚು ಮೊಬೈಲ್ ಬಳಕೆ ಮಾಡದಂತೆ ಎಚ್ಚರಿಕೆ ನೀಡಿದರು.

ABOUT THE AUTHOR

...view details