ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣನ ನಿಧನರಾಗಿದ್ದಾರೆ ಎಂಬ ಸುದ್ದಿ ಹರಿದಾಡಿದ್ದು, ಇದು ಸುಳ್ಳು ಸುದ್ದಿ ಎಂದು ಸ್ವತಃ ನಟ ದೊಡ್ಡಣ್ಣ ವಿಡಿಯೋ ಮಾಡಿ ಸ್ಪಷ್ಟ ಪಡಿಸಿದ್ದಾರೆ.
ನನಗೇನೂ ಆಗಿಲ್ಲ ಮನೆಯಲ್ಲಿ ಆರೋಗ್ಯವಾಗಿದ್ದೇನೆ.. ಸುಳ್ಳು ಸುದ್ದಿ ಕುರಿತು ನಟ ದೊಡ್ಡಣ್ಣ ಸ್ಪಷ್ಟನೆ - ಸುಳ್ಳು ಸುದ್ದಿ
ಯಾರೋ ಕಿಡಿಗೇಡಿಗಳು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡಣ್ಣ ನಿಧನರಾಗಿದ್ದಾರೆ ಎಂಬ ಸುದ್ದಿ ಸುಳ್ಳು ಹರಡಿದ್ದಾರೆ. ಆದರೆ, ನಾನು ಮನೆಯಲ್ಲೇ ಆರೋಗ್ಯವಾಗಿದ್ದೇನೆ ಅಂತಾ ದೊಡ್ಡಣ್ಣ ಸ್ಪಷ್ಟನೆ ನೀಡಿದ್ದಾರೆ.
ನಟ ದೊಡ್ಡಣ್ಣ
ಯಾರೋ ಕಿಡಿಗೇಡಿಗಳು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡಣ್ಣ ನಿಧನರಾಗಿದ್ದಾರೆ ಎಂಬ ಸುದ್ದಿ ಸುಳ್ಳು ಹರಡಿದ್ದಾರೆ. ಆದರೆ, ನಾನು ಮನೆಯಲ್ಲೇ ಆರೋಗ್ಯವಾಗಿದ್ದೇನೆ ಅಂತಾ ದೊಡ್ಡಣ್ಣ ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲ ಈ ಮೂಲಕ ನನಗೆ ಇದ್ದ ಗಂಡಾಂತರದಿಂದ ಕಳೆದು ಹೋಯಿತು ಎಂದುಕೊಂಡಿದ್ದೇನೆ. ಕನ್ನಡಿಗರ ಆರ್ಶೀವಾದ ನನ್ನ ಮೇಲೆ ಇರೋವರೆಗೂ ನನಗೆ ಏನು ಆಗೋಲ್ಲ ಅಂತಾ ದೊಡ್ಡಣ್ಣ ಸುಳ್ಳು ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.