ಕರ್ನಾಟಕ

karnataka

ETV Bharat / sitara

ಹೃದಯ ಬಡಿತ ಏರುಪೇರು.. ಹಿರಿಯ ನಟ ದೊಡ್ಡಣ್ಣ ಜಯದೇವ ಆಸ್ಪತ್ರೆಗೆ ದಾಖಲು - ಐಸಿಯುನಲ್ಲಿ ದೊಡ್ಡಣ್ಣ

ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇದಕ್ಕೂ ಮೊದಲು ಅವರ ಆರೋಗ್ಯ ಕುರಿತು ಅಪಪ್ರಚಾರ ಮಾಡಲಾಗಿತ್ತು. ಆದರೆ ಈಗ ಹೃದಯ ಬಡಿತದಲ್ಲಿ ಏರುಪೇರಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

actor-doddanna-admitted-to-jayadeva-hospital
ಹಿರಿಯ ನಟ ದೊಡ್ಡಣ್ಣ ಜಯದೇವ ಆಸ್ಪತ್ರೆಗೆ ದಾಖಲು

By

Published : Aug 26, 2021, 1:01 PM IST

ಕನ್ನಡ ಚಿತ್ರರಂಗದ ಹಿರಿಯ ನಟ‌ ದೊಡ್ಡಣ್ಣ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೃದಯ ಬಡಿತದಲ್ಲಿ ಏರುಪೇರಾದ ಹಿನ್ನೆಲೆ ಬುಧವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಶಾಶ್ವತ ಪೇಸ್ ಮೇಕರ್ ಅಳವಡಿಸುವ ಕಾರ್ಯ ನಡೆದಿದ್ದು, ಸದ್ಯ ಐಸಿಯುನಲ್ಲಿ ದೊಡ್ಡಣ್ಣ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಯದೇವ ಆಸ್ಪತ್ರೆಯ ವೈದ್ಯರು ಹೇಳಿದಂತೆ ವೈದ್ಯಕೀಯ ಪ್ರಕ್ರಿಯೆ ಪೂರ್ಣವಾಗಿದ್ದು, ದೊಡ್ಡಣ್ಣ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದಿದ್ದಾರೆ.

ಈ ಹಿಂದೆ ಸಿನಿಮಾ ಚಿತ್ರೀಕರಣ ವೇಳೆ ಅನಾರೋಗ್ಯಕ್ಕೆ ತುತ್ತಾಗಿ, ಉತ್ತರ ಕರ್ನಾಟಕದಿಂದ ಆ್ಯಂಬುಲೆನ್ಸ್ ಮೂಲಕ ಬೆಂಗಳೂರು ಆಸ್ಪತ್ರೆಗೆ ಬಂದು ದಾಖಲಾಗಿದ್ದರು.

ಓದಿ:ನಾನು ಪೈನ್‌ ಕಿಲ್ಲರ್, ನಿದ್ರೆ ಮಾತ್ರೆಗಳನ್ನು ತೆಗೆದುಕೊಂಡಿದ್ದೆ: FSL ವರದಿ ನಿಜವೆಂದ ಸಂಜನಾ

ABOUT THE AUTHOR

...view details