ಕರ್ನಾಟಕ

karnataka

ETV Bharat / sitara

ಅಭಿಮಾನಿಗಳ ಪ್ರೀತಿಯ 'ಆಟೋ ರಾಜ' ನಮ್ಮನ್ನಗಲಿ ಇಂದಿಗೆ 30 ವರ್ಷಗಳು - Malgudi days fame Shankarnag

ನಟ, ನಿರ್ದೇಶಕ ಶಂಕರ್​​ನಾಗ್ ನಿಧನರಾಗಿ ಇಂದಿಗೆ 30 ವರ್ಷಗಳು. 35ನೇ ವರ್ಷಕ್ಕೆ ನಿಧನರಾದ ಶಂಕರ್​​ ನಾಗ್ 'ಮಾಲ್ಗುಡಿ ಡೇಸ್' ಧಾರಾವಾಹಿ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದರು. 30ನೇ ವರ್ಷದ ಪುಣ್ಯತಿಥಿಯಂದು ಅಭಿಮಾನಿಗಳು ಶಂಕರ್​​​ನಾಗ್ ಅವರನ್ನು ಸ್ಮರಿಸಿದ್ದಾರೆ.

Shankarnag 30th death Anniversary
ಶಂಕರ್​ನಾಗ್ 30ನೇ ವರ್ಷದ ಪುಣ್ಯಸ್ಮರಣೆ

By

Published : Sep 30, 2020, 4:37 PM IST

ತಮ್ಮ ಡೈಲಾಗ್​, ಮ್ಯಾನರಿಸಂನಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ ನಟ ಕರಾಟೆ ಕಿಂಗ್ ಶಂಕರ್​ ನಾಗ್ ಅಗಲಿ ಇಂದಿಗೆ 30 ವರ್ಷಗಳು. ಆಟೋರಾಜ ಎಂದು ಕೂಡಾ ಹೆಸರಾಗಿದ್ದ ಶಂಕರ್​​ನಾಗ್ ಅವರ ಫೋಟೋಗಳನ್ನು ಇಂದಿಗೂ ಕೂಡಾ ಬಹಳ ಆಟೋಗಳ ಮೇಲೆ ಕಾಣಬಹುದು.

ಶಂಕರ್​ನಾಗ್ 30ನೇ ವರ್ಷದ ಪುಣ್ಯಸ್ಮರಣೆ

ಓದು ಮುಗಿಸಿ ವಿದೇಶಕ್ಕೆ ಹೋಗಬೇಕು ಎಂದುಕೊಂಡಿದ್ದ ಶಂಕರ್ ನಾಗ್ ಅಣ್ಣನ ಬಲವಂತದಿಂದ ರಂಗಭೂಮಿಗೆ ಸೇರಿದರು. ನಂತರ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಬೇಡ ಎಂದುಕೊಂಡ ಬಂದ ಕ್ಷೇತ್ರವನ್ನು ಶಂಕರ್​ನಾಗ್ ಪ್ರೀತಿಯಿಂದ ಅಪ್ಪಿಕೊಂಡರು. ಒಮ್ಮೆ ಅನಂತ್​​ನಾಗ್ ಅವರು ತಮ್ಮನ ಕಾಲು ಎಳೆಯುವ ಉದ್ದೇಶದಿಂದ 'ಶಂಕರ ವಿದೇಶಕ್ಕೆ ಹೋಗಬೇಕೆಂದುಕೊಂಡೆ, ಯಾವಾಗಪ್ಪಾ ಹೋಗುವುದು ಎಂದು ಕೇಳಿದರಂತೆ. ಅದಕ್ಕೆ ಉತ್ತರಿಸಿದ ಶಂಕರ್​​​ ನಾಗ್ ಇನ್ನೆಲ್ಲಿಯ ವಿದೇಶ ಅಣ್ಣ' ಎಂದರಂತೆ. ಏಕೆಂದರೆ ಅಷ್ಟರಲ್ಲಿ ಅವರು ಚಿತ್ರರಂಗದಲ್ಲಿ ಅಷ್ಟು ಬ್ಯುಸಿ ಆಗಿದ್ದರು. ಈ ವಿಚಾರವನ್ನು ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಅನಂತ್ ನಾಗ್ ಹೇಳಿಕೊಂಡಿದ್ದರು.

ಶಂಕರ್​ನಾಗ್ 30ನೇ ವರ್ಷದ ಪುಣ್ಯಸ್ಮರಣೆ

1978 ರಲ್ಲಿ ಗಿರೀಶ್ ಕಾರ್ನಾಡ್ ಅವರ 'ಒಂದಾನೊಂದು ಕಾಲದಲ್ಲಿ' ಚಿತ್ರದ ಮೂಲಕ ಕರಿಯರ್ ಆರಂಭಿಸಿದ ಶಂಕರ್ ನಾಗ್ ನಂತರ ಹಿಂತಿರುಗಿ ನೋಡಲಿಲ್ಲ. 'ಮಿಂಚಿನ ಓಟ' ಚಿತ್ರದ ಮೂಲಕ ನಿರ್ದೇಶನ ಕೂಡಾ ಆರಂಭಿಸಿದ ಶಂಕರ್ ನಾಗ್ ಅಲ್ಲಿಂದ ಮಿಂಚಿನ ವೇಗದಲ್ಲೇ ಅನೇಕ ಸಿನಿಮಾಗಳನ್ನು ನಿರ್ದೇಶಿಸಿದರು. ತಾವು ನಿರ್ದೇಶಿಸಿದ ಮೊದಲ ಚಿತ್ರಕ್ಕೆ 7 ರಾಜ್ಯ ಪ್ರಶಸ್ತಿಗಳನ್ನು ಕೂಡಾ ಪಡೆದರು . 'ಎಸ್​​​ಪಿ ಸಾಂಗ್ಲಿಯಾನ' ಚಿತ್ರವನ್ನಂತೂ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಶಂಕರ್ ನಾಗ್ ಖಾಕಿ ಧರಿಸಿದಾಗ ಅವರಿಗೆ ಎಲ್ಲರ ದೃಷ್ಟಿ ತಾಕುತ್ತಿತ್ತು. ಏಕೆಂದರೆ ಅವರಿಗೆ ಆ ಬಟ್ಟೆ ಅಷ್ಟು ಚೆನ್ನಾಗಿ ಒಪ್ಪುತ್ತಿತ್ತು ಎಂದು ಅವರ ಬಹಳಷ್ಟು ಆತ್ಮೀಯರು ಹೇಳಿದ್ದಾರೆ.

ಶಂಕರ್​ನಾಗ್ 30ನೇ ವರ್ಷದ ಪುಣ್ಯಸ್ಮರಣೆ

'ಮಾಲ್ಗುಡಿ ಡೇಸ್' ಧಾರಾವಾಹಿಯನ್ನು ನಿರ್ದೇಶಿಸಿ ಶಂಕರ್​​ ನಾಗ್ ರಾಷ್ಟ್ರಮಟ್ಟದಲ್ಲೂ ಹೆಸರು ಮಾಡಿದರು. ಇದು ಹಿಂದಿ ಭಾಷೆಯಲ್ಲಿ ತಯಾರಾದರೂ ಇದರಲ್ಲಿ ನಟಿಸಿದ್ದು ಕನ್ನಡ ಕಲಾವಿದರು. ಅನಂತ್ ನಾಗ್, ಡಾ. ವಿಷ್ಣುವರ್ಧನ್, ಗಿರೀಶ್ ಕಾರ್ನಾಡ್, ಗಾಯತ್ರಿ, ಮಾಸ್ಟರ್ ಮಂಜುನಾಥ್ ಹಾಗೂ ಇನ್ನಿತರರು ನಟಿಸಿದ್ದರು. ಶಿವಮೊಗ್ಗದಲ್ಲಿ ಸಂಪೂರ್ಣ ಚಿತ್ರೀಕರಣ ಮಾಡಲಾಗಿತ್ತು.

ಶಂಕರ್​ನಾಗ್ 30ನೇ ವರ್ಷದ ಪುಣ್ಯಸ್ಮರಣೆ

ಚಿಕ್ಕ ವಯಸ್ಸಿಗೆ ದೊಡ್ಡ ಸಾಧನೆ ಮಾಡಿದ್ದ ಅಭಿಮಾನಿಗಳ ಪ್ರೀತಿಯ ಶಂಕ್ರಣ್ಣ 35 ನೇ ವಯಸ್ಸಿಗೆ ಈ ಲೋಕಕ್ಕೆ ವಿದಾಯ ಹೇಳಿದರು. 30 ಸೆಪ್ಟೆಂಬರ್​ 1990 ರಂದು ಚಿತ್ರೀಕರಣ ಮುಗಿಸಿ ಬರುವಾಗ ದಾವಣಗೆರೆ ಬಳಿ ಅವರ ಕಾರು ಆ್ಯಕ್ಸಿಡೆಂಟ್ ಆಗಿ ಶಂಕರ್​ನಾಗ್ ನಿಧನರಾದರು. ಕರಾಟೆ ಕಿಂಗ್​​​​​​​​​​​​ ಶಂಕರ್​ನಾಗ್​​​​​​​​​​​​ ಇಂದು ನಮ್ಮೊಂದಿಗೆ ಇಲ್ಲವಾದರೂ ಅವರ ನೆನಪು ಮಾತ್ರ ಎಂದಿಗೂ ಹಸಿರಾಗಿರುತ್ತದೆ. ಒಂದು ವೇಳೆ ಶಂಕರ್​ ನಾಗ್ ಇಂದಿಗೂ ಬದುಕಿದ್ದರೆ ಕನ್ನಡ ಚಿತ್ರರಂಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿತ್ತು ಎಂಬುದು ಮಾತ್ರ ನಿಜ.

ಶಂಕರ್​ನಾಗ್ 30ನೇ ವರ್ಷದ ಪುಣ್ಯಸ್ಮರಣೆ

ABOUT THE AUTHOR

...view details