ಕರ್ನಾಟಕ

karnataka

ETV Bharat / sitara

ಅನಂತ್​​ನಾಗ್​​ ಅವರು ನಟನೆಗೆ ವಿಶ್ವವಿದ್ಯಾಲಯ ಇದ್ದಂತೆ: ರಿಷಭ್​​ ಶೆಟ್ಟಿ - undefined

ಅನಂತ್​ನಾಗ್​​​​​ ಅವರು ನಟನೆಗೆ ಗುರು ಇದ್ದಂತೆ. ಆ್ಯಕ್ಟಿಂಗ್ ಕಲಿಯಬೇಕು ಎನ್ನುವವರಿಗೆ ಅನಂತ್​​ನಾಗ್ ಸ್ಫೂರ್ತಿಯಾಗಿದ್ದಾರೆ ಎಂದು ನಟ, ನಿರ್ದೇಶಕ ರಿಷಭ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅನಂತ್​​​ನಾಗ್​, ರಿಷಭ್ ಶೆಟ್ಟಿ

By

Published : Apr 12, 2019, 8:41 PM IST

ಎವರ್​ಗ್ರೀನ್ ಯೂನಿವರ್ಸಲ್ ಸ್ಟಾರ್ ಅನಂತ್​​​​​​​​ನಾಗ್ ಅಭಿನಯಕ್ಕೆ ಮನಸೋಲದವರೇ ಇಲ್ಲ. 70 ವರ್ಷ ವಯಸ್ಸಾದರೂ ಅವರ ಚಾರ್ಮ್ ಇನ್ನೂ ಕಡಿಮೆಯಾಗಿಲ್ಲ. ಇವರ ಅಭಿನಯ ಅದೇಷ್ಟೋ ನಟರಿಗೆ ಸ್ಫೂರ್ತಿಯಾಗಿರುವುದೂ ಉಂಟು.

ನಟ, ನಿರ್ದೇಶಕ ರಿಷಭ್ ಶೆಟ್ಟಿ

ನಟ ಯಶ್​ ಕೂಡಾ ಅನಂತ್​​​​​​​​​​​ನಾಗ್ ಅವರ ಅಪ್ಟಟ ಅಭಿಮಾನಿ. ನಾನು ಅನಂತ್​​​​​​​​​​​​​​​​​​​​ನಾಗ್ ಅವರಿಂದ ಸಾಕಷ್ಟು ಕಲಿತಿದ್ದೇನೆ. ನಟನೆಗೆ ಅನಂತ್​​​​​ನಾಗ್ ಅವರು ಗುರು ಇದ್ದಂತೆ ಎಂದು ಹೇಳಿದ್ದರು. ಈಗ ಮತ್ತೊಬ್ಬ ನಟ, ನಿರ್ದೇಶಕ ಕೂಡಾ ನಟನೆಯಲ್ಲಿ ಅನಂತ್​​​​​​​​​​​​​​​​ನಾಗ್ ನನಗೆ ಸ್ಫೂರ್ತಿ ಎಂದು ಹೇಳಿದ್ದಾರೆ. ಹೌದು, 50 ದಿನಗಳನ್ನು ಪೂರೈಸಿದ 'ಬೆಲ್​ ಬಾಟಂ' ಡಿಟೆಕ್ಟಿವ್ ದಿವಾಕರನಿಗೆ ಹಿರಿಯ ನಟ ಅನಂತ್​​ನಾಗ್​ ಸ್ಫೂರ್ತಿಯಂತೆ. ಈ ವಿಚಾರವನ್ನು ರಿಷಭ್ ಶೆಟ್ಟಿ ಅವರೇ ಹೇಳಿಕೊಂಡಿದ್ದಾರೆ.

ಒಂದು ಪ್ರಮುಖ ಪಾತ್ರದಲ್ಲಿ ನಟಿಸುವಾಗ ನಮಗೆ ಜವಾಬ್ದಾರಿ ಹೆಚ್ಚಾಗಿರುತ್ತದೆ. ಇದಕ್ಕೆ ಮೊದಲೇ ತಯಾರಿ ಕೂಡಾ ನಡೆಸಬೇಕಿರುತ್ತದೆ. ಇನ್ನು ಈ ವಿಚಾರದಲ್ಲಿ ಅನಂತ್​​​​​​​​​​​​​​​​​​​​​​​​​​ನಾಗ್ ಅವರ ಜೊತೆ ನಾನು ಕೆಲಸ ಮಾಡಿದ್ದು ನನಗೆ ಬಹಳ ಹೆಲ್ಪ್ ಆಯ್ತು. ಅನಂತ್​​ನಾಗ್​​​​ ಅವರು ನಟನೆಗೆ ವಿಶ್ವವಿದ್ಯಾಲಯ ಇದ್ದಂತೆ. ಅವರಿಂದ ಕಲಿಯುವುದು ಬಹಳಷ್ಟಿದೆ. ಒಂದು ಚಿಕ್ಕ ದೃಶ್ಯಕ್ಕೂ ಸಾಕಷ್ಟು ತಯಾರಿ ಮಾಡಿಕೊಂಡು ಅಭಿನಯಿಸುತ್ತಾರೆ. ಸಹ ಕಲಾವಿದರ ಜೊತೆ ರಿಹರ್ಸಲ್ ಮಾಡಿ ಪಾತ್ರಕ್ಕೆ ಜೀವ ತುಂಬುತ್ತಾರೆ.

ನಾನು ಮೊದಲಿನಿಂದಲೂ ಅನಂತ್​​​​​​ನಾಗ್ ಅಭಿಮಾನಿ. ಅದರಲ್ಲೂ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಚಿತ್ರದಲ್ಲಿ ಅವರ ಅಭಿನಯ ನೋಡಿದ ಮೇಲೆ ನಾನು ಅವರಿಂದ ಸಾಕಷ್ಟು ಸ್ಫೂರ್ತಿ ಪಡೆದು 'ಬೆಲ್​​ ಬಾಟಂ' ಚಿತ್ರದಲ್ಲಿ ನಟಿಸಿದ್ದೇನೆ. ಯಾರಾದ್ರೂ ಆ್ಯಕ್ಟಿಂಗ್ ಕೋರ್ಸ್​ಗೆ ಸೇರಬೇಕು ಎಂದುಕೊಂಡಿರುವವರು ಅನಂತ್​​​​​​​ನಾಗ್ ಅವರ ಅಭಿನಯ ನೋಡಿದ್ರೆ ಸಾಕು, ಅದರಿಂದ ಸಾಕಷ್ಟು ಕಲಿಯಬಹುದು ಎಂದು ಅನಂತ್​ ಅವರನ್ನು ಹೊಗಳಿದ್ದಾರೆ ರಿಷಭ್​​​.

For All Latest Updates

TAGGED:

ABOUT THE AUTHOR

...view details