ಯಶಸ್ವಿ ನಿರ್ದೇಶಕ ಹಾಗೂ ನಟ ರಿಷಭ್ ಶೆಟ್ಟಿ ತಮ್ಮ ಸ್ಮೃತಿ ಪಟಲದಿಂದ ಕೆಲವು ನೆನಪುಗಳನ್ನು ಹೊರಹಾಕಿದ್ದಾರೆ. ಅವರ ಗುರು ಅರವಿಂದ್ ಕೌಶಿಕ್ ಅವರನ್ನು ನೆನದಿದ್ದಾರೆ.
ನಿರ್ದೇಶಕ ರಿಷಭ್ ಶೆಟ್ಟಿ ಹೇಳಿದ ₹ 500 ಕಥೆ - ಶಾರ್ದೂಲ ಚಿತ್ರದ ಟ್ರೇಲರ್
ರಿಷಭ್ ಶೆಟ್ಟಿ ತಮ್ಮ ಗುರು ಅರವಿಂದ್ ಕೌಶಿಕ್ ಅವರ ‘ಶಾರ್ದೂಲ’ ಚಿತ್ರದ ಟ್ರೇಲರ್ ರಿಲೀಸ್ ಮಾಡಿ ಹಿಂದಿನ ದಿವಸಗಳಿಗೆ ಮರಳಿದ್ದರು. ತಮ್ಮ ಹಾಗೂ ಅರವಿಂದ್ ಅವರ ಪರಿಚಯ, ಸ್ನೇಹದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಡಿದ್ದಾರೆ.
ನಿರ್ದೇಶಕ ರಿಷಭ್ ಶೆಟ್ಟಿ
ಅದು ಶೆಟ್ಟರ ಕಷ್ಟದ ದಿವಸಗಳು, ಕೈಯಲ್ಲಿ ಕಾಸಿಲ್ಲ ಮತ್ತು ಕೆಲಸವೂ ಇರಲಿಲ್ಲ. ಈ ವೇಳೆ ‘ನಮ್ ಏರಿಯಾದಲ್ ಒಂದ್ ದಿನ’ (2010) ಚಿತ್ರದ ಮೂಲಕ ನಿರ್ದೇಶಕ ಅರವಿಂದ್ ಕೌಶಿಕ್ ಕ್ಯಾಂಪ್ ಸೇರುತ್ತಾರೆ. ಅಲ್ಲಿ ದಿವಸಕ್ಕೆ 500 ರೂಪಾಯಿ ಪಡೆದು ಕೆಲಸ ಮಾಡುತ್ತಾರೆ. ಆ ಟೀಮ್ ಅಲ್ಲೇ ರಿಷಭ್ ಶೆಟ್ಟಿಗೆ ರಕ್ಷಿತ್ ಶೆಟ್ಟಿ ಪರಿಚಯ ಆಗಿದ್ದು. 500 ರೂಪಾಯಿಯಂತೆ ಐದು ದಿವಸಕ್ಕೆ ಬಂದ ₹2500 ಹಣವನ್ನು ಪಾರ್ಟಿ ಮಾಡಿ ಖರ್ಚು ಮಾಡಿಕೊಂಡಿದ್ದನ್ನು ರಿಷಭ್ ಹೇಳಿಕೊಂಡ್ರು.