ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಪ್ರ್ರೇರಣಾ ಸರ್ಜಾ ಮಹಾಮಾರಿ ಕೊರೊನಾ ವೈರಸ್ ವಿರುದ್ದ ಹೋರಾಡಿ ಗೆದ್ದಿದ್ದಾರೆ.
ಹೌದು ಕಳೆದ ಜುಲೈ 15 ರಂದು ಧ್ರುವ ಸರ್ಜಾ ಹಾಗೂ ಪ್ರೇರಣಾ ಸರ್ಜಾಗೆ ಕೊರೊನಾ ಸೋಂಕು ಪತ್ತೆಯಾಗಿತ್ತು. ಇನ್ನು ಈ ವಿಷಯವನ್ನ ಧ್ರುವ ಸರ್ಜಾ ಅವರೇ ಹೇಳಿಕೊಂಡು, ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದರು.
ಕಿಲ್ಲರ್ ಕೊರೊನ ವಿರುದ್ದ ಗೆದ್ದ ಧ್ರುವ ಸರ್ಜಾ ದಂಪತಿ ಆದ್ರೆ ಧ್ರುವಸರ್ಜಾ ಹಾಗೂ ಪ್ರೇರಣಾ ವೈದ್ಯರ ಸಲಹೆ ಮೆರೆಗ ಕೇವಲ ಒಂದೇ ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೋಂ ಐಸೋಲೇಷನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೇ ಇಂದು ಇಬ್ಬರು ಮತ್ತೆ ಕೋವಿಡ್ 19 ಟೆಸ್ಟ್ ಮಾಡಿಸಿದ್ದು, ನಮಗಿಬ್ಬರಿಗೂ ಕೊರೊನಾ ನೆಗೆಟಿವ್ ವರದಿ ಬಂದಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ನಿಮ್ಮೆಲ್ಲರ ಪ್ರಾರ್ಥನೆ ಹಾಗೂ ಅಣ್ಣನ ಆಶೀರ್ವಾದ ನಮ್ಮ ಮೇಲಿದ್ದ ಕಾರಣ ನಾವು ಬೇಗ ಚೇತರಿಸಿಕೊಂಡಿದ್ದೇವೆ. ಅಲ್ಲದೇ ಎಲ್ಲ ಕಠಿಣ ಘಟ್ಟಗಳಲ್ಲಿ ನಮ್ಮ ಜೊತೆ ನಿಲ್ಲುವ ಮಾವ ಅರ್ಜುನ್ ಸರ್ಜಾ ಅವರಿಗೆ ಧನ್ಯವಾದ ಹೇಳಿದ್ದಾರೆ.
ಅದೇ ರೀತಿ, ಕೊರೊನಾಗೆ ಚಿಕಿತ್ಸೆ ನೀಡಿದ ವೈದ್ಯರಾದ ಸುರ್ಜಿತ್ ಪಾಲ್ ಸಿಂಗ್ ಹಾಗೂ ಅರೋಗ್ಯ ಸಹಾಯಕ ರಾಜ್ ಕುಮಾರ್ಗೆ ವಿಶೇಷ ಧನ್ಯವಾದ ಹೇಳಿದ್ದಾರೆ.