ಕೊರೊನಾದಿಂದಾಗಿ ಕೇಂದ್ರ ಸರ್ಕಾರ ಚಿತ್ರಮಂದಿಗಳನ್ನ ಸಂಪೂರ್ಣವಾಗಿ ಬಂದ್ ಮಾಡಿತ್ತು. ಬಳಿಕ ಶೇ.50ರಷ್ಟು ಸಿನಿಮಾ ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿತ್ತು. ಆದ್ರೆ ಇದೀಗ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗೆ ಇಡೀ ಚಿತ್ರರಂಗವೇ ಎದ್ದು ನಿಂತಿದೆ.
ಕೆಲವು ದಿನಗಳ ಹಿಂದೆ ಕೇಂದ್ರ ಸರ್ಕಾರ ಮತ್ತೊಂದು ಮಾರ್ಗಸೂಚಿಯನ್ನ ಹೊರಡಿಸಿ ಅದರಲ್ಲಿ ಚಿತ್ರಮಂದಿರಗಳಲ್ಲಿ ಪೂರ್ತಿಯಾಗಿ 100 ಪರ್ಸೆಂಟ್ ಅವಕಾಶ ನೀಡಿದೆ. ಆದರೆ ಈ ನಿರ್ಧಾರವನ್ನು ತೆಗೆದುಕೊಳ್ಳಲು ಆಯಾ ರಾಜ್ಯ ಸರ್ಕಾರಕ್ಕೆ ಬಿಟ್ಟಿತ್ತು. ಈಗ ಕರ್ನಾಟಕ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಚಿತ್ರಮಂದಿರಗಳಿಗೆ 50 ಪರ್ಸೆಂಟ್ ಮಾತ್ರ ಹೇಳಲಾಗಿದೆ. ಇದು ನಟ ಧ್ರುವ ಸರ್ಜಾ ಅಸಮಾಧಾನಕ್ಕೆ ಕಾರಣವಾಗಿದೆ.
ಬಸ್ನಲ್ಲಿ ಫುಲ್ ರಶ್..! ಮಾರ್ಕೆಟ್ನಲ್ಲಿ ಗಿಜಿ ಗಿಜಿ ಅಂತಾ ಜನರು ಇರ್ತಾರೆ. ಆದರೆ, ಚಿತ್ರಮಂದಿರಕ್ಕೆ ಮಾತ್ರ ನಿರ್ಬಂಧ ಯಾಕೆ ಅಂತ ಧ್ರುವ ಸರ್ಜಾ ಟ್ವಿಟರ್ನಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. ಶೇ.100ರಷ್ಟು ಆಸನ ವ್ಯವಸ್ಥೆಗೆ ಅನುವು ಮಾಡಿಕೊಡಿ ಎಂದು ಧ್ರುವ ಸರ್ಜಾ ಪ್ರಶ್ನೆ ಮಾಡಿದ್ದಾರೆ.
ಸರ್ಕಾರ ನಿರ್ಧಾರ ಬದಲಾಗಬೇಕು ಹ್ಯಾಟ್ರಿಕ್ ಹೀರೋ!
ಇನ್ನು ಈ ಪ್ರಶ್ನೆಗೆ ಚಿತ್ರರಂಗದ ಸಾಮೂಹಿಕ ನಾಯಕತ್ವ ವಹಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಧ್ವನಿ ಎತ್ತಿದ್ದಾರೆ. ಎಲ್ಲರಿಗೂ 100 ಪರ್ಸೆಂಟ್ ಅನುಮತಿ ಕೊಟ್ಟಿರುವಾಗ, ನಾಮಗ್ಯಾಕೆ ಅನುಮತಿ ಇಲ್ಲ. ಕೂಡಲೇ ಸರ್ಕಾರದ ನಿಲುವು ಬದಲಾಗಬೇಕು ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
ಧ್ರುವ ಸರ್ಜಾಗೆ ಸ್ಯಾಂಡಲ್ವುಡ್ನ ನಟ,ನಿರ್ದೇಶಕರ ಸಪೋರ್ಟ್!
ರಾಜ್ಯ ಸರ್ಕಾರಕ್ಕೆ ಧ್ರುವ ಸರ್ಜಾ ಟ್ಟೀಟ್ಟರ್ನಲ್ಲಿ ಪ್ರಶ್ನೆ ಎತ್ತಿದ್ದು, ಅದಕ್ಕೆ ಸ್ಯಾಂಡಲ್ ವುಡ್ ನಟ ಹಾಗೂ ನಿರ್ದೇಶಕರು ಸಪೋರ್ಟ್ಗೆ ಬಂದಿದ್ದಾರೆ. ಇತ್ತೀಚೆಗೆ ನಡೆದ ರೈತರ ಪ್ರತಿಭಟನೆ ಹಾಗೂ ಕಾಂಗ್ರೆಸ್ ಪ್ರತಿಭಟನೆಗಳಿಗೆ ಇಲ್ಲದ ಕೊರೊನಾ ಮಾರ್ಗಸೂಚಿ ಈಗ ಚಿತ್ರಮಂದಿಗಳಿಗೆ ಯಾಕೇ ಅನ್ನೋದು ನಟ, ನಿರ್ದೇಶಕರ ಪ್ರಶ್ನೆಯಾಗಿದೆ. ಹೀಗಾಗಿ ಧ್ರುವ ಸರ್ಜನಿಗೆ, ನಟ ಪುನೀತ್ ರಾಜ್‍ಕುಮಾರ್, ಶ್ರೀಮುರಳಿ, ದುನಿಯಾ ವಿಜಯ್, ಧನಂಜಯ್, ನಿರ್ದೇಶಕರಾದ ಪ್ರಶಾಂತ್ ನೀಲ್, ಪವನ್ ಒಡೆಯರ್, ಸಿಂಪಲ್ ಸುನಿ ಸೇರಿದಂತೆ ಸಾಕಷ್ಟು ನಟ, ನಿರ್ದೇಶಕರು ಸರ್ಕಾರಕ್ಕೆ ಪ್ರಶ್ನೆ ಎತ್ತಿದ್ದಾರೆ.
ಕಾರಣ ಇದೇ ಫೆಬ್ರವರಿ.19ಕ್ಕೆ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ, ಕನ್ನಡ ಹಾಗೂ ತೆಲುಗಿನಲ್ಲಿ ದೊಡ್ಡಮಟ್ಟದಲ್ಲೇ ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಧ್ರುವ ಸರ್ಜಾ ಪ್ರಶ್ನೆ ಮಾಡಿದ್ದಾರೆ. ಧ್ರುವ ಮಾತಿಗೆ ಸರ್ಕಾರ 100 ಪರ್ಸೆಂಟ್ ಅವಕಾಶ ನೀಡುತ್ತಾ ಕಾದು ನೋಡಬೇಕು.