ಸ್ಟಾರ್ ನಟರ ಸಕ್ಸಸ್ ಹಿಂದೆ ಅವರ ಪತ್ನಿಯರ ಪಾಲು ಇರುತ್ತೆ. ನಿರ್ಮಾಪಕಿಯಾಗಿ, ಕಾಸ್ಟೂಮ್ ಡಿಸೈನರ್ ಆಗಿ ಕೆಲ ನಟರ ಪತ್ನಿಯರು ಗಮನ ಸೆಳೆದಿದ್ದಾರೆ. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ಮಾತ್ರ ಸ್ವಲ್ಪ ವಿಭಿನ್ನ.
'ಉದಯೋನ್ಮುಖ ಮಹಿಳಾ ಉದ್ಯಮಿ' ಪ್ರಶಸ್ತಿ ಮುಡಿಗೇರಿಸಿಕೊಂಡ 'ಚಾಲೆಂಜಿಂಗ್ ಸ್ಟಾರ್ ಪತ್ನಿ' - ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಪ್ರಶಸ್ತಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿಯ 'ಮೈ ಫ್ರೆಶ್ ಬಾಸ್ಕೆಟ್' ಉದ್ಯಮಕ್ಕೆ ಭಾರಿ ಪ್ರಶಂಸೆ ದೊರಕಿದ್ದು, ಟೈಮ್ಸ್ ಬ್ಯುಸಿನೆಸ್ನವರು 'ಉದಯೋನ್ಮುಖ ಮಹಿಳಾ ಉದ್ಯಮಿ' ಎಂಬ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ವಿಜಯಲಕ್ಷ್ಮಿ ಹೊಸ ಉದ್ಯಮ ಆಂಭಿಸಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ರು. 'ಮೈ ಫ್ರೆಶ್ ಬಾಸ್ಕೆಟ್' ಎಂಬ ಆನ್ ಲೈನ್ ಮೂಲಕ ತಾಜಾ ತರಕಾರಿಗಳನ್ನ, ರೈತರಿಂದ ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾರೆ. ದರ್ಶನ್ ಪತ್ನಿಯ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.
ವಿಜಯಲಕ್ಷ್ಮಿ ಆರಂಭಿಸಿರುವ ಆನ್‍ಲೈನ್ ಉದ್ಯಮಕ್ಕೆ ಸಂಬಂಧಪಟ್ಟಂತೆ ಇದೀಗ ಅವರಿಗೆ ಟೈಮ್ಸ್ ಬ್ಯುಸಿನೆಸ್ನವರು ಉದಯೋನ್ಮುಖ ಮಹಿಳಾ ಉದ್ಯಮಿ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಸಂತೋಷವನ್ನು ಹಂಚಿಕೊಂಡಿದ್ದಾರೆ. ಈ ವಿಚಾರ ದಚ್ಚು ಅಭಿಮಾನಿಗಳಿಗೆ ಖುಷಿ ನೀಡಿದೆ.