ಸ್ನೇಹಿತರಾಗಿ, ದಂಪತಿ, ಪೋಷಕರಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ 18 ವರ್ಷಗಳ ಕಾಲ ನಾನು ಮತ್ತು ಪತ್ನಿ ಐಶ್ವರ್ಯ ಜೀವನ ಮಾಡಿದೆವು. ಇಂದು ನಾವು ನಮ್ಮ ಮಾರ್ಗಗಳು ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ. ಐಶ್ವರ್ಯ ಮತ್ತು ನಾನು ಬೇರೆಯಾಗಲು ನಿರ್ಧರಿಸಿದ್ದೇವೆ ಎಂದು ನಟ ಧನುಷ್ ಇದೇ ಸೋಮವಾರದಂದು ಶಾಕಿಂಗ್ ಸುದ್ದಿ ನೀಡಿದ್ದರು.
ಆದ್ರೆ ನಟ ಧನುಷ್ ಅವರ ತಂದೆ ಕಸ್ತೂರಿರಾಜ ಸಂದರ್ಶನವೊಂದರಲ್ಲಿ ಧನುಷ್ ಮತ್ತು ಐಶ್ವರ್ಯಾ ನಡುವೆ ಯಾವುದೇ ವಿಚ್ಛೇದನದ ಮಾತುಕತೆ ಇಲ್ಲ ಎಂದು ತಿಳಿಸಿದ್ದಾರೆ. ಅವರು ಕುಟುಂಬ ಕಲಹಗಳನ್ನು( ಮನಸ್ಥಾಪಗಳನ್ನು) ಹೊಂದಿದ್ದಾರೆ, ಇದು ವಿವಾಹಿತರಲ್ಲಿ ಸಾಮಾನ್ಯ. ಸದ್ಯ ಅವರು ಚೆನ್ನೈನಲ್ಲಿ ಇಲ್ಲ, ಹೈದರಾಬಾದ್‌ನಲ್ಲಿದ್ದಾರೆ. ಅವರಿಗೆ ದೂರವಾಣಿ ಕರೆ ಮಾಡಿ ಸಲಹೆಯನ್ನೂ ನೀಡಿದ್ದೇನೆ ಎಂದು ಕಸ್ತೂರಿರಾಜ ಅವರು ತಿಳಿಸಿದ್ದಾರೆ.