ಬೆಂಗಳೂರು: ಕೋವಿಡ್ ಎಂಬ ಹೆಮ್ಮಾರಿಯಿಂದಾಗಿ ಇಡೀ ವಿಶ್ವದಲ್ಲೇ ಸಾಕಷ್ಟು ಬದಲಾವಣೆಗೆ ಕಾರಣವಾಗಿದೆ. ಇದರ ಎಫೆಕ್ಟ್ ಸಿನಿಮಾ ಕ್ಷೇತ್ರಕ್ಕೂ ಹೊರತಾಗಿಲ್ಲ. ದೊಡ್ಡ ಪರದೆ ಮೇಲೆ, ನೂರಾರು ಪ್ರೇಕ್ಷಕರ ಮಧ್ಯೆ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವ ಮಜವೇ ಬೇರೆ. ಆದರೆ, ಕೊರೊನಾದಿಂದ ಚಿತ್ರಮಂದಿರಗಳ ಮೇಲೆ ಕರಿಛಾಯೆ ಅವರಿಸಿದ್ದು, ಒಟಿಟಿ ಪ್ಲಾಟ್ ಫಾರಂನಲ್ಲಿ ಸಿನಿಮಾಗಳ ಬಿಡುಗಡೆ ಮಾಡೋದಕ್ಕೆ ನಿರ್ಮಾಪಕರು ಹೆಚ್ಚು ಮಹತ್ವ ಕೊಡುತ್ತಿದ್ದಾರೆ.
ಎಲ್ಲ ಭಾಷೆಯ ಸಿನಿಮಾಗಳನ್ನು ಫ್ಯಾಮಿಲಿ ಸಮೇತ ಮನೆಯಲ್ಲೇ ಕುಳಿತು ನೋಡುವ ಟ್ರೆಂಡ್ ಶುರುವಾಗಿದೆ. ಇದೀಗ ಕನ್ನಡ ಚಿತ್ರರಂಗದಲ್ಲೂ ಒಟಿಟಿಗೆ ಹೆಚ್ಚು ಮಹತ್ವ ಕೊಡಲಾಗುತ್ತಿದೆ. ಸದ್ಯ ಸ್ಯಾಂಡಲ್‌ವುಡ್ ಬಹು ಬೇಡಿಕೆಯ ನಟನಾಗಿ ಹೊರ ಹೊಮ್ಮಿರುವ ನಟ ಡಾಲಿ ಧನಂಜಯ್ ಟಗರು ಸಿನಿಮಾ ಬಳಿಕ ತನ್ನದೇ ಇಮೇಜ್ ಹೊಂದಿರುವ ಧನಂಜಯ್ ಸಿನಿಮಾಗಳನ್ನು ದೊಡ್ಡ ಪರದೆ ಮೇಲೆ ನೋಡುಲು ಅಭಿಮಾನಿಗಳು ಕಾತರರಾಗಿ ಇರ್ತಾರೆ.
ಆದ್ರೆ ಧನಂಜಯ್ ಅಭಿನಯದ ಬಹುನಿರೀಕ್ಷೆಯ ರತ್ನನ್ ಪ್ರಪಂಚ ಸಿನಿಮಾ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ. ಈಗಾಗಲೇ ಟ್ರೈಲರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದ್ದ ರತ್ನನ್ ಪ್ರಪಂಚ ಸಿನಿಮಾ ಅಕ್ಟೋಬರ್ 22 ರಂದು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಆಗುತ್ತಿದೆ.
ಈ ಕುರಿತು ಮಾತನಾಡಿರೋ ರತ್ನನ್ ಪ್ರಪಂಚ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ಯೋಗಿ ಜಿ ರಾಜ್, ಎಲ್ಲ ಭಾಷೆಯ ಸಿನಿಮಾಗಳ ಅದ್ದೂರಿತನ, ಕಥೆ ಕನ್ನಡ ಸಿನಿಮಾಗಳಲ್ಲೂ ಇದೆ. ಹೀಗಾಗಿ ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ. ಮತ್ತೊಂದು ಇಡೀ ವಿಶ್ವದ ಜನರಿಗೆ ಸಿನಿಮಾ ರೀಚ್ ಆಗುತ್ತೆ. ಜೊತೆಗೆ ಮನೆಯಲ್ಲೇ ಇಡೀ ಕುಟುಂಬದ ಜೊತೆಗೆ ಸಿನಿಮಾ ನೋಡ್ತಾರೆ. ಹೀಗಾಗಿ ಒಟಿಟಿಯಲ್ಲಿ ರತ್ನನ್ ಪ್ರಪಂಚ ಸಿನಿಮಾ ಬಿಡುಗಡೆ ಮಾಡ್ತಾ ಇದ್ದೀವಿ ಎನ್ನುತ್ತಾರೆ.
ನಟ ಧನಂಜಯ್ ಟ್ವೀಟ್ ಮಾಡಿದ್ದು, ನಗು+ ತಿರುವು+ ರೊಮ್ಯಾನ್ಸ್= ರತ್ನಕರನ ಪ್ರಪಂಚ ಎಂದು ಬರೆದುಕೊಂಡಿದ್ದಾರೆ. ಈ ಹಿಂದೆ ದಯವಿಟ್ಟು ಗಮನಿಸಿ ಚಿತ್ರ ಮಾಡಿ ಗಮನ ಸೆಳೆದಿದ್ದ, ನಿರ್ದೇಶಕ ರೋಹಿತ್ ಪದಕಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಧನಂಜಯ್ ಜೊತೆ ಕನ್ನಡದ ಹಿರಿಯ ನಟಿ ಉಮಾಶ್ರೀ ನಟಿಸಿದ್ದಾರೆ.
ಧನಂಜಯ್ ತಾಯಿಯ ಪಾತ್ರದಲ್ಲಿ ಉಮಾಶ್ರೀ ಮಿಂಚಿದ್ದಾರೆ. ಅನೇಕ ವರ್ಷಗಳ ಬಳಿಕ ನಟಿ ಉಮಾಶ್ರೀ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಇನ್ನು ಚಿತ್ರದಲ್ಲಿ ನಾಯಕಿಯಾಗಿ ರೆಬಾ ಮೋನಿಕಾ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಸಿನಿಮಾದಲ್ಲಿ ರವಿಶಂಕರ್, ಅನುಪ್ರಭಾಕರ್, ವೈನಿಧಿ ಜಗದೀಶ್, ಅಚ್ಯುತ್ ಕುಮಾರ್, ನಟಿ ಶ್ರುತಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರತ್ನನ್ ಪ್ರಪಂಚ ರತ್ನಾಕರನ ಜೀವನ ಮತ್ತು ಪ್ರಯಾಣದ ಸುತ್ತ ಕೇಂದ್ರೀಕರಿತವಾದ ಟ್ರಾವೆಲ್ ಕಾಮಿಡಿ ಡ್ರಾಮ, ಒಟಿಟಿಯಲ್ಲಿ ಎಷ್ಟರ ಮಟ್ಟಿಗೆ ಸೌಂಡ್ ಮಾಡುತ್ತೆ ಅನ್ನೋದು ಇದೇ ತಿಂಗಳು ಗೊತ್ತಾಗಲಿದೆ.