ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಟ್ವಿಟ್ಟರ್ ಖಾತೆಯನ್ನು ಯಾರೋ ಹ್ಯಾಕ್ ಮಾಡಿದ್ದಾರೆ. ಈ ಬಗ್ಗೆ ಸ್ವತಃ ವಿಜಯಲಕ್ಷ್ಮಿ ಅವರೇ ಖಚಿತಪಡಿಸಿದ್ದಾರೆ.
"ಆತ್ಮೀಯರೇ, ನನ್ನ ಟ್ವಿಟ್ಟರ್ ಅಕೌಂಟ್ನಿಂದ ಯಾವುದೇ ಕೆಟ್ಟ ಪೋಸ್ಟ್ ಅಥವಾ ಸಂದೇಶಗಳು ಬಂದಲ್ಲಿ ದಯವಿಟ್ಟು ಕ್ಷಮಿಸಿ. ಸಾಮಾಜಿಕ ಜಾಲತಾಣಗಳ ಖಾತೆಗಳು ಹ್ಯಾಕ್ ಆಗಿವೆ." ಎಂದು ಬರೆದಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟಿವ್ ಆಗಿದ್ದು, ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ಕುರಿತು ಆಗಾಗ ಅಪ್‍ಡೇಟ್ ನೀಡುತ್ತಿರುತ್ತಾರೆ.
ಇದೀಗ ಇದ್ದಕ್ಕಿದ್ದಂತೆ ಅಕೌಂಟ್ ಹ್ಯಾಕ್ ಆಗಿರುವ ಕುರಿತು ತಿಳಿಸಿ, ಅಭಿಮಾನಿಗಳನ್ನು ಅಚ್ಚರಿ ಪಡುವಂತೆ ಮಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ವಿಜಯಲಕ್ಷ್ಮಿ ಹೊಸ ಉದ್ಯಮವನ್ನು ಆರಂಭಿಸಿದ್ರು. ಮೈ ಫ್ರೆಶ್ ಬಾಸ್ಕೆಟ್ ಎಂಬ ಆನ್ ಲೈನ್ ಆ್ಯಪ್ ಒಂದನ್ನು ತೆರೆದು ರೈತರಿಗೆ ನೆರವಾಗಿದ್ದರು. ಆ್ಯಪ್ ಮೂಲಕ ರೈತರು ನೇರವಾಗಿ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ನೀಡಬಹುದಾಗಿದೆ.
ಅಲ್ಲದೆ ಗ್ರಾಹಕರಿಗೂ ರೈತರಿಂದ ನೇರವಾಗಿ ತರಕಾರಿ ಹಾಗೂ ಹಣ್ಣುಗಳು ತಲುಪುತ್ತಿವೆ. ಹೀಗೆ ರೈತರಿಗೆ ನೆರವಾಗುವ ಸಲುವಾಗಿ ವಿಜಯಲಕ್ಷ್ಮಿ ಅವರು ಮಾಡಿದ ಈ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.