ಕನ್ನಡ ಚಿತ್ರರಂಗದಲ್ಲಿ ಅಭಿನಯದ ಮೂಲಕ ಛಾಪು ಮೂಡಿಸಿರುವ ನಟಿ ಹಾಗೂ ರಾಜಕಾರಿಣಿ ಸುಮಲತಾ ಅಂಬರೀಶ್ 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸುಮಲತಾ ತಮ್ಮ ಹುಟ್ಟುಹಬ್ಬಕ್ಕೆ ಆಪ್ತರಿಗೆ ಪಾರ್ಟಿ ನೀಡಿದ್ದಾರೆ.
ಸುಮಲತಾ ಅಂಬರೀಶ್ ಹುಟ್ಟುಹಬ್ಬದ ಸಂಭ್ರಮ ಪಂಚಭಾಷಾ ತಾರೆಯಾಗಿ ಮಿಂಚಿರುವ ಸುಮಲತಾ ಅಂಬರೀಶ್, ತಮ್ಮ ಹುಟ್ಟುಹಬ್ಬವನ್ನು ಬಹಳ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ. ಪಾರ್ಟಿಗೆ ಕೇವಲ ತಮ್ಮ ಆಪ್ತರನ್ನು ಮಾತ್ರ ಸುಮಲತಾ ಆಹ್ವಾನಿಸಿದ್ದರು.
ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟರು, ಗಣ್ಯರು ಬರ್ತ್ಡೇ ಪಾರ್ಟಿಯಲ್ಲಿ ನಟ ದರ್ಶನ್, ಯಶ್-ರಾಧಿಕಾ, ಪ್ರಿಯಾಂಕ ಉಪೇಂದ್ರ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಸಚಿವ ಕೆ.ಸುಧಾಕರ್, ವಿಷ್ಣುವರ್ಧನ್ ಪುತ್ರಿ ಕೀರ್ತಿ ಅನಿರುದ್ಧ್ ಸೇರಿದಂತೆ ಕುಟುಂಬಸ್ಥರು, ಗೆಳೆಯರು ಭಾಗಿಯಾಗಿದ್ದಾರೆ.
ಪಾರ್ಟಿಯಲ್ಲಿ ಭಾಗಿಯಾಗಿದ್ದ ಯಶ್,ದರ್ಶನ್, ಗುರುಕಿರಣ್ ಸಂಸದೆ ಸುಮಲತಾ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಜೋಡೆತ್ತುಗಳೆಂದು ಕರೆಯಿಸಿಕೊಂಡಿರುವ ನಟ ದರ್ಶನ್ ಮತ್ತು ಯಶ್ ಭಾಗಿಯಾಗಿದ್ದರು. ಯಶ್ ಜೊತೆಗೆ ಪತ್ನಿ ರಾಧಿಕಾ, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪತ್ನಿ ಪ್ರಿಯಾಂಕ, ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಸ್ಯಾಂಡಲ್ವುಡ್ನ ಸಾಕಷ್ಟು ಮಂದಿ ಭಾಗಿಯಾಗಿದ್ದರು.
ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟರು, ಗಣ್ಯರು ಸುಮಲತಾರ ಹುಟ್ಟುಹಬ್ಬಕ್ಕೆ ಕೇವಲ ನಟ-ನಟಿಯರು ಮಾತ್ರವಲ್ಲದೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು, ರಾಜಕಾರಣಿಗಳು, ಆಪ್ತರು ಶುಭ ಕೋರಿದ್ದಾರೆ.
ಸುಮಲತಾ ಅಂಬರೀಶ್ ಹಾಗೂ ಪುತ್ರ ಅಭಿಷೇಕ್ ಬಹಳ ದಿನಗಳ ಬಳಿಕ ಯಶ್, ದರ್ಶನ್, ಉಪೇಂದ್ರ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಗುರುಕಿರಣ್ ಫ್ಯಾಮಿಲಿ ಸೇರಿದಂತೆ ಸಾಕಷ್ಟು ಕಲಾವಿದರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಸದ್ಯ ಸುಮಲತಾ ಅಂಬರೀಷ್ ಹುಟ್ಟುಹಬ್ಬದ ಪಾರ್ಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.