ಬೆಂಗಳೂರು:ಸ್ಯಾಂಡಲ್ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಮಹಾಮಾರಿ ಕೋವಿಡ್ ಸೋಂಕು ತಗುಲಿದೆ ಎಂಬ ವಂದತಿ ಹರಿದಾಡಿದ್ದು, ಇದೀಗ ಅದಕ್ಕೆ ಟ್ವೀಟ್ ಮಾಡುವ ಮೂಲಕ ಡಿ ಬಾಸ್ ಪತ್ನಿ ಸ್ಪಷ್ಟನೆ ನೀಡಿದ್ದಾರೆ.
ದರ್ಶನ್ ಪತ್ನಿಗೆ ಕೊರೊನಾ ಹರಡಿರುವ ವದಂತಿ: ಟ್ವೀಟ್ ಮೂಲಕ ಈ ರೀತಿ ಸ್ಪಷ್ಟನೆ ನೀಡಿದ ಡಿ ಬಾಸ್ ಪತ್ನಿ! - ಕೊರೊನಾ ವೈರಸ್
ನಟ ದರ್ಶನ್ ಪತ್ನಿಗೆ ಕೋವಿಡ್ ಸೋಂಕು ಹರಡಿದೆ ಎಂಬ ವದಂತಿ ಹಬ್ಬಿದ್ದು, ಇದೀಗ ಖುದ್ದಾಗಿ ಡಿಬಾಸ್ ಪತ್ನಿ ವಿಜಯಲಕ್ಷ್ಮಿ ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ.
Actor Darshan wife
ಟ್ವೀಟ್ ಮಾಡಿರುವ ವಿಜಯಲಕ್ಷ್ಮಿ, ನನಗೆ ಕೊರೊನಾ ವೈರಸ್ ಪಾಸಿಟಿವ್ ಇದೆ ಎಂದು ಯಾವುದಾದರೂ ವದಂತಿಯನ್ನು ನೀವು ಕೇಳಿದ್ದರೆ, ಅದು ಸುಳ್ಳು. ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ. ಇಂತಹ ಕಠಿಣ ಸಂದರ್ಭದಲ್ಲಿ ನೀವೆಲ್ಲರೂ ಕೂಡ ಸುರಕ್ಷಿತವಾಗಿರಿ' ಎಂದು ಟ್ವೀಟ್ ಮಾಡಿದ್ದಾರೆ.
ಡಿ ಬಾಸ್ ದರ್ಶನ್ ಪತ್ನಿ ವಾಸವಿರುವ ಹೊಸಕೆರೆಹಳ್ಳಿಯ ಪ್ರಸ್ಟೀಜ್ ಅಪಾರ್ಟ್‍ಮೆಂಟ್‍ನಲ್ಲಿರುವ ಕೆಲವರಿಗೆ ಕೊರೊನಾ ಸೋಂಕು ತಗುಲಿದೆ ಎಂಬ ಸುದ್ದಿ ಹಬ್ಬಿತ್ತು. ಡಿ ಬಾಸ್ ಪತ್ನಿಗೂ ಕೊರೊನಾ ಸೋಂಕು ತಗುಲಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.