ಕರ್ನಾಟಕ

karnataka

ETV Bharat / sitara

ಕ್ರೇಜಿ ಸ್ಟಾರ್ ಪುತ್ರನಿಗೆ ದರ್ಶನ್ ಕೊಟ್ರು ಸೂಪರ್ ಗಿಫ್ಟ್​ - ಯಜಮಾನ

ಪ್ರಾರಂಭ ಸಿನಿಮಾ ಸೆಟ್ಟೇರಿ ತುಂಬಾ ದಿನಗಳೇ ಕಳೆದಿತ್ತು. ಇದೀಗ ಶೂಟಿಂಗ್​ ಕಂಪ್ಲೀಟ್ ಮಾಡಿ ಡಬ್ಬಿಂಗ್ ಕೆಲಸ ಶುರುವಾಗಿದೆ. ಈ ಚಿತ್ರದ ಟೀಸರ್​ಗೆ ದರ್ಶನ್ ವಾಯ್ಸ್ ಡಬ್ ಮಾಡ್ತಿದ್ದಾರೆ.

actor darshan

By

Published : Aug 17, 2019, 2:23 PM IST

ಚಾಲೆಂಜಿಂಗ್​ ಸ್ಟಾರ್ ದರ್ಶನ್​ ತಾನೂ ಬೆಳೆದು, ಇತರರನ್ನು ಬೆಳೆಸುವ ಮಹಾನಟ. ಹೊಸಬರ ಸಿನಿಮಾಗಳಿಗೆ ಪ್ರೋತ್ಸಾಹಿಸುವಲ್ಲಿ ಡಿ ಬಾಸ್​ ಸದಾ ಮುಂದು.

ಸ್ಯಾಂಡಲ್​​ವುಡ್​​ನ ಈ ಯಜಮಾನ ಎಷ್ಟೇ ಬ್ಯುಸಿಯಿದ್ರೂ ಹೊಸಬರ ಸಿನಿಮಾಗಳ ಬೆನ್ನು ತಟ್ಟುತ್ತಾರೆ. ಇದೀಗ ಕ್ರೇಜಿಸ್ಟಾರ್​ ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್ ಅವರ ಸಿನಿಮಾಗೂ ಸಾಥ್​ ನೀಡಿದ್ದಾರೆ.

ದರ್ಶನ್ ಜತೆ ಪ್ರಾರಂಭ ಚಿತ್ರತಂಡ

ಈ ಹಿಂದೆ ರವಿಚಂದ್ರನ್​ ಅವರ ದಶರಥ ಸಿನಿಮಾಗೆ ಹಾಡು ಹೇಳಿದ್ದ ದರ್ಶನ್, ಈಗ ಅವರ ಪುತ್ರ ಮನೋರಂಜನ್ ಅಭಿನಯದ ಪ್ರಾರಂಭ ಚಿತ್ರಕ್ಕೆ ಧ್ವನಿ ನೀಡಿದ್ದಾರೆ. ಪ್ರಾರಂಭ ಸಿನಿಮಾ ಸೆಟ್ಟೇರಿ ತುಂಬಾ ದಿನಗಳೇ ಕಳೆದಿತ್ತು. ಇದೀಗ ಶೂಟಿಂಗ್​​ ಕಂಪ್ಲೀಟ್ ಮಾಡಿ ಡಬ್ಬಿಂಗ್ ಕೆಲಸ ಶುರುವಾಗಿದೆ. ಈ ಚಿತ್ರದ ಟೀಸರ್​ಗೆ ದರ್ಶನ್ ವಾಯ್ಸ್ ಡಬ್ಬಿಂಗ್ ಮಾಡ್ತಿದ್ದಾರೆ.

ಡಬ್ಬಿಂಗ್​ಲ್ಲಿ ಡಿ ಬಾಸ್​ ಬ್ಯುಸಿ

ಇನ್ನು ಈ ಚಿತ್ರದಲ್ಲಿ ಕೀರ್ತಿ ಕಲಕೇರಿ, ಕಡ್ಡಿಪುಡಿ ಚಂದ್ರು, ಹನುಮಂತೇ ಗೌಡ, ಸೂರಜ್ ಸೇರಿದಂತೆ ಬಹುತೇಕರು ನಟಿಸಿದ್ದು ಚಿತ್ರಕ್ಕೆ ಮನು ಕಲ್ಯಾಡಿ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಸಾಹಸವಿದೆ. ಇದೇ ತಿಂಗಳ 23 ಕ್ಕೆ ಚಿತ್ರದ ಟೀಸರ್ ರಿಲೀಸ್ ಆಗಲಿದೆ.

ಡಬ್ಬಿಂಗ್​ಲ್ಲಿ ಡಿ ಬಾಸ್​ ಬ್ಯುಸಿ

ABOUT THE AUTHOR

...view details