ಬೆಂಗಳೂರು: ಕಳೆದ 20 ವರ್ಷದಿಂದ ನಟ ದರ್ಶನ್ರ ಪರ್ಸನಲ್ ಮೇಕಪ್ ಮ್ಯಾನ್ ಆಗಿದ್ದ ಶ್ರೀನಿವಾಸ್ ಹೃದಯಘಾತದಿಂದ ಸಾವನ್ನಪ್ಪಿದ್ದಕ್ಕೆ ಸಂತಾಪ ಸೂಚಿಸಿದ್ದು, ಶ್ರೀನಿವಾಸ್ರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ.
ಮೇಕಪ್ ಮ್ಯಾನ್ ಶ್ರೀನಿವಾಸ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ದರ್ಶನ್! - ರಾಬರ್ಟ್ ಮೂವಿ
ಕೊರೊನಾ ಭೀತಿಯನ್ನೂ ಲೆಕ್ಕಿಸದೇ ನಟ ದರ್ಶನ್ ತಮ್ಮ ಮೇಕಪ್ ಮ್ಯಾನ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಅವರ ಕುಟುಂಬಕ್ಕೆ ಧೈರ್ಯ ತುಂಬಿದ್ದರು.
ಮೇಕಪ್ ಮ್ಯಾನ್ ಶ್ರೀನಿವಾಸ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ದರ್ಶನ್
ಲಗ್ಗೇರೆಯ ಶ್ರೀನಿವಾಸ್ ನಿವಾಶಕ್ಕೆ ತೆರಳಿ ಪಾರ್ಥಿವ ಶರೀರದ ದರ್ಶನ ಪಡೆದುಕೊಂಡ ದರ್ಶನ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕಳೆದ ಇಪ್ಪತ್ತು ವರ್ಷಗಳಿಂದ ಶ್ರೀನಿವಾಸ್ ದರ್ಶನ್ ಅವರಿಗೆ ಮೇಕಪ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಇಂದು ಹೃದಯಾಘಾತದಿಂದ ಸಾವನಪ್ಪಿದ್ದು. ಶ್ರೀನಿವಾಸ್ ನಿಧನದ ಸುದ್ದಿ ತಿಳಿದು ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದರು.