ಕರ್ನಾಟಕ

karnataka

ETV Bharat / sitara

ಪುದುಚೇರಿಯ ಶನಿದೇವರ ಮೊರೆ ಹೋದ ನಟ ದರ್ಶನ್ - Actor Darshan visit to pondicherry shanideva temple

ನಟ ದರ್ಶನ್​ ಪುದುಚೇರಿ ತಿರುನಲ್ಲಾರ್, ಶನಿದೇವ ದೇವಾಲಯಕ್ಕೆ ಗೆಳೆಯರೊಂದಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

Actor Darshan
ಪಾಂಡಿಚೆರಿಯ ಶನಿದೇವರ ದೇವಸ್ಥಾನಕ್ಕೆ ದರ್ಶನ್​ ಭೇಟಿ

By

Published : Jul 24, 2021, 5:37 PM IST

Updated : Jul 24, 2021, 5:43 PM IST

ಕೆಲ ದಿನಗಳ ಹಿಂದೆ ಸ್ಯಾಂಡಲ್​ವುಡ್​ನಲ್ಲಿ ಹೆಚ್ಚು ಸುದ್ದಿಯಲ್ಲಿದ್ದ ನಟ ದರ್ಶನ್, ಇದೀಗ ಟೆಂಪಲ್ ರನ್ ಮಾಡ್ತಿದ್ದಾರೆ. 25 ಕೋಟಿ ರೂಪಾಯಿ ಶ್ಯೂರಿಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಹಾಗೂ ಬ್ಯಾಂಕ್ ಮ್ಯಾನೇಜರ್ ಎನ್ನಲಾದ ಅರುಣಾಕುಮಾರಿ ಪ್ರಕರಣ ಗಾಂಧಿನಗರದಲ್ಲಿ ಸಂಚಲನ ಸೃಷ್ಟಿಸಿತ್ತು.

ಪಾಂಡಿಚೆರಿಯ ಶನಿದೇವರ ದೇವಸ್ಥಾನಕ್ಕೆ ದರ್ಶನ್​ ಭೇಟಿ

ಈ ಗಲಾಟೆ ಬೆನ್ನಲ್ಲೇ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾಡಿದ ಆರೋಪದಿಂದ ದರ್ಶನ್ ಕುಪಿತರಾಗಿ, ಗಂಡಸ್ತನದ ಬಗ್ಗೆ ಸವಾಲುಗಳನ್ನ ಹಾಕಿದ್ದರು. ದರ್ಶನ್ ಮತ್ತು ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರತ್ಯಾರೋಪಗಳ ಬಳಿಕ, ದರ್ಶನ್ ಮಾಧ್ಯಮಗಳ ಬಗ್ಗೆ ಅವಾಚ್ಯ ಶಬ್ದಗಳನ್ನ ಬಳಸಿ ನಿಂದಿಸಿದ್ದರು.

ಪಾಂಡಿಚೆರಿಯ ಶನಿದೇವರ ದೇವಸ್ಥಾನಕ್ಕೆ ದರ್ಶನ್​ ಭೇಟಿ

ಈ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈಗ ವಿವಾದಗಳಿಂದ ದೂರವಾಗಿ, ನೆಮ್ಮದಿ ಪಡೆಯಲೆಂದು ದರ್ಶನ್ ತಮಿಳುನಾಡಿನ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಪುದುಚೇರಿಯಲ್ಲಿರುವ ತಿರುನಲ್ಲಾರ್, ಶನಿದೇವ ದೇವಾಲಯಕ್ಕೆ ಗೆಳೆಯರೊಂದಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಪಾಂಡಿಚೆರಿಯ ಶನಿದೇವರ ದೇವಸ್ಥಾನಕ್ಕೆ ದರ್ಶನ್​ ಭೇಟಿ

ಇನ್ನು, ದರ್ಶನ್ ಜೀವನದಲ್ಲಿ ಏನಾದರು ವಿವಾದಗಳು ಹಾಗೂ ಸಮಸ್ಯೆಗಳು ಸೃಷ್ಟಿಯಾದಾಗ ಈ ಶನಿದೇವರ ಮೊರೆ ಹೋಗುತ್ತಾರೆ. ಈಗ ಮತ್ತೆ ವಿವಾದಗಳ ಕೇಂದ್ರಬಿಂದು ಆಗಿರುವ ದರ್ಶನ್, ಶನಿದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ..

ಇದನ್ನೂ ಓದಿ:ಪ್ರಭಾಸ್, ದೀಪಿಕಾ & ಬಿಗ್ ಬಿ ಅಭಿನಯಿಸುತ್ತಿರುವ ಚಿತ್ರದ ಶೂಟಿಂಗ್​ ಶುರು... ಯಾವುದಾ ಚಿತ್ರ?

Last Updated : Jul 24, 2021, 5:43 PM IST

ABOUT THE AUTHOR

...view details