ಮೈಸೂರು :ನಮ್ಮ ಅಪ್ಪ ಬಂದಿರೋದು ದೊಡ್ಡ ಮನೆಯಿಂದಲೇ.. ಇದೇ ರಾಜ್‌ಕುಮಾರ್ ಕಂಪನಿಯಿಂದ ನಮ್ಮ ಅಪ್ಪ ಬಂದಿರೋದು ಎಂದು ನಟ ದರ್ಶನ್ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ಗೆ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಇಂದು ಮೈಸೂರಿನ ತಮ್ಮ ಫಾರಂಹೌಸ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಒಬ್ಬ ಲೈಟ್ ಬಾಯ್ ಆಗಿ ಸೇರಿಕೊಂಡಿದ್ದು ಕೂಡ ಇದೇ ಪೂರ್ಣಿಮಾ ಎಂಟರ್ಪ್ರೈಸಸ್‌ನಲ್ಲಿ ಬಂದ ಜನುಮದ ಜೋಡಿಯಿಂದ 175 ರೂಪಾಯಿ ಬಾಟಾದಿಂದ ನಾನು ಸ್ಟಾರ್ಟ್ ಮಾಡಿರೋದು. ಇನ್ನು, ನೂರು ವರ್ಷವಾದ್ರೂ ದೊಡ್ಮನೆ ದೊಡ್ಮನೆನೇ ಎಂದು ಹೇಳಿದ್ದಾರೆ.