ಕರ್ನಾಟಕ

karnataka

ETV Bharat / sitara

'ಭೂಪತಿ' vs ಉಮಾಪತಿ ಮನಸ್ತಾಪಕ್ಕೆ ಪೂರ್ಣವಿರಾಮ: 'ಲೇಡಿ' ವಿರುದ್ಧ ಸಮರಕ್ಕೆ 'ದುರ್ಯೋಧನ'ನ ತಯಾರಿ - ನಟ ದರ್ಶನ್ ಹೆಸರಲ್ಲಿ ವಂಚನೆ

ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಜನತಾ ಬಜಾರ್ ಬಳಿ ಇರೋ ಅಪಾರ್ಟ್‌ಮೆಂಟ್ ಒಂದರಲ್ಲಿ ಒಟ್ಟಿಗೆ ಮಾತುಕತೆ ನಡೆಸಿದ್ದಾರಂತೆ. ಮುಂದೆ ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಎಂದು ತೀರ್ಮಾನಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

actor-darshan-puts-full-stop-for-fake-papers-cheating-case
ನಟ ದರ್ಶನ್ ಹೆಸರಲ್ಲಿ ವಂಚನೆ

By

Published : Jul 13, 2021, 8:20 PM IST

ಬೆಂಗಳೂರು: ಸ್ಯಾಂಡಲ್​ವುಡ್​​ನಲ್ಲಿ ಸಂಚಲನ ಸೃಷ್ಟಿಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಲ್ಲಿ ವಂಚನೆ ಪ್ರಕರಣ ಇಂದು ಅನೇಕ ಬೆಳವಣಿಗೆಗೆ ಕಾರಣವಾಗಿತ್ತು. ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಖಾಸಗಿ ಹೋಟೆಲ್‌ನಲ್ಲಿ ಭೇಟಿಯಾಗಿ ಚರ್ಚಿಸಿದ್ದು, ಇಷ್ಟು ದಿನದ ವಿವಾದಕ್ಕೆ ಪೂರ್ಣ ವಿರಾಮ ನೀಡುವ ಸುಳಿವು ಸಿಕ್ಕಿದೆ.

ದರ್ಶನ್​ ಮಾಡಿರುವ ಆರೋಪಗಳಿಗೆ ಈಗಾಗಲೇ ಉಮಾಪತಿ ಸ್ಪಷ್ಟನೆ ನೀಡಿದ್ದಾರೆ. ಇಂದು ಮಧ್ಯಾಹ್ನದ ಹೊತ್ತಿಗೆ, ನಿರ್ದೇಶಕ ಹಾಗು ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಹಾಗೂ ಸ್ನೇಹಿತ ನಾಗವರ್ಧನ್, ದರ್ಶನ್ ಹಾಗೂ ಉಮಾಪತಿಯವರನ್ನು ಭೇಟಿಯಾಗಿ ಈ ಹಿಂದೆ ಅರುಣಾ ಕುಮಾರಿ ತಮಗೂ ಮೋಸ ಮಾಡಿದ್ದಾರೆಂದು ದಾಖಲೆಗಳನ್ನು ತೋರಿಸಿದ್ದಾರೆ.

ಈ ಬೆಳವಣಿಗೆಗೆ ಬಳಿಕ ದರ್ಶನ್ ಹಾಗೂ ಉಮಾಪತಿ ಜನತಾ ಬಜಾರ್ ಬಳಿ ಇರೋ ಅಪಾರ್ಟ್‌ಮೆಂಟ್ ಒಂದರಲ್ಲಿ ಒಟ್ಟಿಗೆ ಮಾತುಕತೆ ನಡೆಸಿದ್ದಾರಂತೆ. ಮುಂದೆ ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಎಂದು ತೀರ್ಮಾನಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ದರ್ಶನ್, ಹರ್ಷ, ರಾಕೇಶ್ ಶರ್ಮಾ, ರಾಕೇಶ್ ಪಾಪಣ್ಣ ನಡುವೆ ಇದ್ದ ಗೊಂದಲವೂ ಸಹ ಇತ್ಯರ್ಥವಾಗಿದೆ.

ಈ ಪ್ರಕರಣ ಇಲ್ಲಿಗೇ ಅಂತ್ಯ ಆಗಿದೆ. ನಾವೆಲ್ಲ ಸೇರಿ ಆರೋಪಿ ಅರುಣಾ ಕುಮಾರಿ ವಿರುದ್ಧ ಕಾನೂನು ಹೋರಾಟ ಮಾಡ್ತೇವೆ. ಯಾಕಂದ್ರೆ ಆ ಲೇಡಿಯನ್ನು ಹೀಗೇ ಬಿಟ್ರೆ ಬೇರೆಯವರಿಗೂ ಮೋಸ ಮಾಡ್ತಾಳೆ. ಅವಳಿಗೆ ಕಾನೂನು ಹೋರಾಟದ ಮೂಲಕವೇ ಪಾಠ ಕಲಿಸ್ತೀವಿ ಅಂತಾ ಇಬ್ಬರೂ ತೀರ್ಮಾನಿಸಿರುವ ಮಾಹಿತಿ ದೊರೆತಿದೆ.

ABOUT THE AUTHOR

...view details