ಕರ್ನಾಟಕ

karnataka

ETV Bharat / sitara

'ಡಿ ಬಾಸ್' ಒಂದು ಮನವಿಯಿಂದ ಮೃಗಾಲಯಗಳಿಗೆ ಹರಿದು ಬಂದ ಹಣ ₹____ ಕೋಟಿ - ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ನಟ ದರ್ಶನ್‌

ಸಿನಿಮಾ ತಾರೆಯರು, ಜನ ಸಾಮಾನ್ಯರು, ಪ್ರಾಣಿ-ಪಕ್ಷಿಗಳನ್ನ ದತ್ತು ಪಡೆಯುವ ಮೂಲಕ ಮೃಗಾಯಲಗಳಲ್ಲಿ ಉಂಟಾಗಿದ್ದ ಆರ್ಥಿಕ ಪರಿಸ್ಥಿತಿಯನ್ನ ಸುಧಾರಿಸಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳಾದ ಉಪೇಂದ್ರ, ಅಮೂಲ್ಯ, ಕಾವ್ಯಗೌಡ, ನಿರ್ಮಾಪಕಿ-ನಟಿ ಶೃತಿ ನಾಯ್ಡು, ಶೈಲಾಜಾ ನಾಗ್ ಸೇರಿದಂತೆ ಚಿತ್ರರಂಗದ ತಾರೆಯರು ಪ್ರಾಣಿ-ಪಕ್ಷಿಗಳನ್ನ ದತ್ತು ಪಡೆದಿದ್ದಾರೆ..

actor-darshan-fan
ನಟ ದರ್ಶನ್‌

By

Published : Jun 23, 2021, 9:01 PM IST

ಬೆಂಗಳೂರು :ಕೊರೊನಾ ಲಾಕ್‌ಡೌನ್‌ನಿಂದಾಗಿ ರಾಜ್ಯದ 9 ಮೃಗಾಲಯಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದವು. ಇದರಿಂದಾಗಿ ಪ್ರಾಣಿಗಳ ಆಹಾರಕ್ಕೂ ಹಣವಿಲ್ಲದೆ, ಪರದಾಡುತ್ತಿರುವ ಸ್ಥಿತಿ ಕರ್ನಾಟಕ ಮೃಗಾಲಯಗಳಿಗೆ ಆಗಿತ್ತು. ಈ ಸಮಯದಲ್ಲಿ ಪ್ರಾಣಿ-ಪಕ್ಷಿ ಪ್ರಿಯ ಹಾಗೂ ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ನಟ ದರ್ಶನ್‌ ಅವರಿಗೆ ಮೃಗಾಲಯದ ಸಂಕಷ್ಟಕ್ಕೆ ನೆರವಾಗಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ದರ್ಶನ್ ಅವರು ವಿಡಿಯೋ ಮೂಲಕ, ಪ್ರಾಣಿ-ಪಕ್ಷಿಗಳನ್ನ ದತ್ತು ಪಡೆಯುವಂತೆ ಜನರಲ್ಲಿ ಮನವಿ ಮಾಡಿದರು. ಈ ಮನವಿಗೆ ರಾಜ್ಯಾದ್ಯಂತ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ.

ಓದಿ: 'ಡಿ ಬಾಸ್' ಮನವಿಗೆ ಸ್ಪಂದಿಸಿದ ಅಭಿಮಾನಿಗಳು.. ಪ್ರಾಣಿ ಸಂಗ್ರಹಾಲಯಕ್ಕೆ ಬಂತು ಕೋಟಿ ಹಣ

ಸಿನಿಮಾ ತಾರೆಯರು, ಜನ ಸಾಮಾನ್ಯರು, ಪ್ರಾಣಿ-ಪಕ್ಷಿಗಳನ್ನ ದತ್ತು ಪಡೆಯುವ ಮೂಲಕ ಮೃಗಾಯಲಗಳಲ್ಲಿ ಉಂಟಾಗಿದ್ದ ಆರ್ಥಿಕ ಪರಿಸ್ಥಿತಿಯನ್ನ ಸುಧಾರಿಸಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳಾದ ಉಪೇಂದ್ರ, ಅಮೂಲ್ಯ, ಕಾವ್ಯಗೌಡ, ನಿರ್ಮಾಪಕಿ-ನಟಿ ಶೃತಿ ನಾಯ್ಡು, ಶೈಲಾಜಾ ನಾಗ್ ಸೇರಿದಂತೆ ಚಿತ್ರರಂಗದ ತಾರೆಯರು ಪ್ರಾಣಿ-ಪಕ್ಷಿಗಳನ್ನ ದತ್ತು ಪಡೆದಿದ್ದಾರೆ.

ಅಂದಹಾಗೆ ರಾಜ್ಯದ ಮೃಗಾಲಯಗಳಿಗೆ ಈವರೆಗೆ 2 ಕೋಟಿ ರೂ. ಅಧಿಕ ದೇಣಿಗೆ ಸಂದಾಯವಾಗಿದೆ ಎಂದು ಝೂ ಆಫ್ ಕರ್ನಾಟಕ ತಿಳಿಸಿದೆ. 6 ಸಾವಿರಕ್ಕೂ ಹೆಚ್ಚು ಜನರು ದತ್ತು ಸ್ವೀಕಾರ ಮಾಡಿದ್ದಾರೆ. ಇದರಿಂದ ಮೃಗಾಲಯ ನಿರ್ವಹಣೆಯ ಹೊರೆ ಕೊಂಚ ಕಡಿಮೆ ಆದಂತಾಗಿದೆ.

ಇಂದಿನಿಂದ ಬೆಳಗಾವಿ, ಗದಗ, ಹಂಪಿ ಮೃಗಾಲಯ ಓಪನ್ ಆಗುತ್ತಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಾಣಿ ಹಾಗೂ ಪಕ್ಷಿ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ ಎಂದು ಝೂ ಆಫ್ ಕರ್ನಾಟಕ ತಿಳಿಸಿದೆ.

ABOUT THE AUTHOR

...view details